ಕರ್ನಾಟಕ

karnataka

ETV Bharat / state

ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿ ಹರಿದು ಇಬ್ಬರಿಗೆ ಗಂಭೀರ ಗಾಯ - Two persons injured due to bulla cart crash

ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದಾಗ ವೇಗವಾಗಿ ಬಂದ ಎತ್ತಿನಗಾಡಿ ಹೊಸಳ್ಳಿ ಗ್ರಾಮದ ಇಬ್ಬರು ಯುವಕರ ಮೇಲೆ ಹರಿದಿದ್ದು, ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

myosre
ಎತ್ತಿನಗಾಡಿ ಹರಿದು ಇಬ್ಬರಿಗೆ ಗಂಭೀರ ಗಾಯ

By

Published : Mar 29, 2021, 9:27 AM IST

Updated : Mar 29, 2021, 10:42 AM IST

ಮೈಸೂರು:ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿ ಇಬ್ಬರು ಯುವಕರ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ‌. ನರಸೀಪುರ ಪಟ್ಟಣದಲ್ಲಿ ನಡೆದಿದೆ.

ತಿ. ನರಸೀಪುರ ಪಟ್ಟಣದ ಹೊರವಲಯದ ಮೈದಾನದಲ್ಲಿ ಭಾನುವಾರ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದಾಗ, ವೇಗವಾಗಿ ಬಂದ ಎತ್ತಿನಗಾಡಿ ಹೊಸಳ್ಳಿ ಗ್ರಾಮದ ಯುವಕ ರವಿ, ಮತ್ತೊಬ್ಬನ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎತ್ತಿನಗಾಡಿ ಹರಿದು ಇಬ್ಬರಿಗೆ ಗಂಭೀರ ಗಾಯ

ಇದನ್ನು ಓದಿ:ಹೋಟೆಲ್​ಗೆ ನುಗ್ಗಿದ ಟ್ರಕ್​.. ಮಾಲೀಕ ಸೇರಿ 8 ಜನ ಸಾವು, ಪೊಲೀಸರ ಮೇಲೆ ಕಲ್ಲು ತೂರಾಟ!

ಯುವಕರ ಮೇಲೆ ಎತ್ತಿನಗಾಡಿ ಹರಿದು ಪಲ್ಟಿ ಹೊಡೆದಿದ್ದರಿಂದ ಕೂಡಲೇ ಜಾಗೃತರಾದ ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾದರು. ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಣೆ ಮಾಡಲು, ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಇಂತಹ ಅನಾಹುತ ನಡೆದಿದೆ.

ಶ್ರೀ ಚೌಡೇಶ್ವರಿ ಅಮ್ಮನವರ ಯುವಕರ ಸ್ನೇಹ ಬಳಗದಿಂದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

Last Updated : Mar 29, 2021, 10:42 AM IST

ABOUT THE AUTHOR

...view details