ಮೈಸೂರು:ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಪೆನ್ನಲೆ ತೋ (18) ಹಾಗು ಫೆಮಸೀರಮಗ್ (18) ಎಂಬಿಬ್ಬರು ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದಾರೆ.
ಪೆನ್ನಾಲೆ ತೋ ಎಂಬವರ ಮೃತದೇಹವನ್ನು ಮಂಗಳವಾರ ಕಾವೇರಿ ನದಿಯಿಂದ ಹೊರ ತೆಗೆಯಲಾಗಿದೆ. ಆ ಬಳಿಕ ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಫೆಮಸೀರಮಗ್ ಅವರ ಮೃತದೇಹವನ್ನು ಬುಧವಾರ ಪೊಲೀಸರು ಹೊರತೆಗೆದರು.