ಮೈಸೂರು: ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕದ ಮೊದಲ ಪ್ರದರ್ಶನ ಯಶಸ್ವಿಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪ್ರದರ್ಶನಗೊಂಡಿದೆ. ರಂಗಾಯಣದ ನಿರ್ದೇಶಕರಾದ ಎ ಸಿ ಕಾರ್ಯಪ್ಪ ಬರೆದು, ನಿರ್ದೇಶನ ಮಾಡಿರುವ ' ಟಿಪ್ಪು ನಿಜ ಕನಸುಗಳು' ನಾಟಕ ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಂಡಿತು.
ಪೊಲೀಸ್ ಭದ್ರತೆ ನಡುವೆ ಪ್ರದರ್ಶನಗೊಂಡ 'ಟಿಪ್ಪು ನಿಜ ಕನಸುಗಳು' ನಾಟಕ - ಈಟಿವಿ ಭಾರತ ಕನ್ನಡ
ರಂಗಾಯಣದ ನಿರ್ದೇಶಕರಾದ ಎ ಸಿ ಕಾರ್ಯಪ್ಪ ಬರೆದು, ನಿರ್ದೇಶನ ಮಾಡಿರುವ ' ಟಿಪ್ಪು ನಿಜ ಕನಸುಗಳು' ನಾಟಕ ಭಾನುವಾರ ರಂಗಾಯಣದ ಭೂಮಿಗೀತದಲ್ಲಿ ಪೊಲೀಸ್ ಬಿಗಿ ಭದ್ರತೆಗಳೊಂದಿಗೆ ಪ್ರದರ್ಶನಗೊಂಡಿತು.
ಪೊಲೀಸ್ ಭದ್ರತೆ ನಡುವೆ ಪ್ರದರ್ಶನಗೊಂಡ 'ಟಿಪ್ಪು ನಿಜ ಕನಸುಗಳು' ನಾಟಕ
ಮೊದಲ ಪ್ರದರ್ಶನವನ್ನು ಪ್ರಸಿದ್ಧ ಕಾದಂಬರಿಕಾರರಾದ ಎಸ್ .ಎಲ್. ಬೈರಪ್ಪ, ಶಾಸಕ ಕೆ. ಜಿ. ಬೋಪಯ್ಯ, ಸಂಸದ ಪ್ರತಾಪ್ ಸಿಂಹರ ಹೆಂಡತಿ ಅರ್ಪಿತಾ ಸಿಂಹ ಸೇರಿದಂತೆ ಹಲವು ಗಣ್ಯರು ನಾಟಕ ವೀಕ್ಷಿಸಿದರು. ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ, ಡಿಸಿಪಿ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಭದ್ರತೆ ಒದಗಿಸಲಾಗಿತ್ತು.
ಇದನ್ನೂ ಓದಿ :ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಬೇಡ ಅಂತ ಹೇಳಿದ್ದೆ: ಸಿ ಎಂ ಇಬ್ರಾಹಿಂ