ಮೈಸೂರು: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು 'ಒಡೆಯರ್ ಎಕ್ಸ್‌ಪ್ರೆಸ್' ಎಂದು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ಶುಕ್ರವಾರ ತಿಳಿಸಿದೆ. ಹಾಗೆಯೇ ತಾಳಗುಪ್ಪ-ಮೈಸೂರು ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು 'ಕುವೆಂಪು ಎಕ್ಸ್‌ಪ್ರೆಸ್' ಎಂದು ಮರು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು 'ಒಡೆಯರ್ ಎಕ್ಸ್‌ಪ್ರೆಸ್' ನಿಮಗೆ ಸೇವೆ ನೀಡಲಿದೆ!!. ಮೈಸೂರು-ತಾಳಗುಪ್ಪ ರೈಲು 'ಕುವೆಂಪು ಎಕ್ಸ್‌ಪ್ರೆಸ್' ಆಗಲಿದೆ ಎಂದು ತಿಳಿಸಿದ್ದಾರೆ.