ಮೈಸೂರು:ಕ್ರೀಡಾಪಟುಗಳ ಹಣ ತಿಂದು ತಿಂದು ಹೆಚ್ಚಾಗಿದ್ದಾರೆ. ಇವರನ್ನು ಸೆಸ್ಪಂಡ್ ಮಾಡಿ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಡೆ ನೋಡಿ ಸಂಬೋಧಿಸುತ್ತಾ ಕ್ರೀಡಾ ಇಲಾಖೆ ಕಾರ್ಯದರ್ಶಿಗೆ ಸಚಿವ ವಿ.ಸೋಮಣ್ಣ ಖಡಕ್ ಸೂಚನೆ ನೀಡಿದ್ರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಏರ್ಪಡಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನೆಗೆ ಸಚಿವ ವಿ. ಸೋಮಣ್ಣ ಆಗಮಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಗೆಂದು ವೇದಿಕೆ ಮೇಲೆ ಆಗಮಿಸಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಅವರನ್ನು ನೋಡಿ, ದಸರಾ ಮುಗಿದು ಎಷ್ಟು ತಿಂಗಳಾಯಿತು? ಕ್ರೀಡಾಪಟುಗಳಿಗೆ ಇನ್ನೂ ಯಾಕೆ ಹಣ ಕೊಟ್ಟಿಲ್ಲ?. ಇವರನ್ನು ಸೆಸ್ಪೆಂಡ್ ಮಾಡಿ ಎಂದು ಕ್ರೀಡಾ ಇಲಾಖೆ ಕಾರ್ಯದರ್ಶಿ ಕಲ್ಪನಾಗೆ ಅವರಿಗೆ ಖಡಕ್ ಸೂಚನೆ ನೀಡಿದರು.
ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗಾಗಿ ₹7.50 ಕೋಟಿ ಕೊಡಲಾಗಿದೆ. ಹಣ ಕೊಟ್ಟು 2.5 ತಿಂಗಳುಗಳೇ ಕಳೆದಿದ್ದರೂ ಹಣ ಮಾತ್ರ ವಿತರಿಸಿಲ್ಲ. ಹಾಗಾದ್ರೆ ಹಣ ಎಲ್ಲಿ ಹೋಯಿತು?. ಹಣ ತಿಂದು ತಿಂದು ತೇಗಿದ್ದಾರೆ ಅನಿಸುತ್ತದೆ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.