ಮೈಸೂರು:ಡಾಕ್ಟರ್ ಮನೆಯಲ್ಲಿ 2 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ 11 ಲಕ್ಷ ನಗದನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಖಾಸಗಿ ಆಸ್ಪತ್ರೆ ನಡೆಸುತ್ತಿರುವ ವೈದ್ಯ ಡಾ. ರಾಜೀವ್ ಅವರ ವಿಜಯನಗರ ನಾಲ್ಕನೇ ಹಂತದಲ್ಲಿರುವ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಮನೆಯಲ್ಲಿ ಬರೋಬ್ಬರಿ 2 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ, 11 ಲಕ್ಷ ನಗದು, 10 ಕೆಜಿ ಬೆಳ್ಳಿ, 20 ವಿದೇಶಿ ವಾಚ್ಗಳನ್ನು ದೋಚಿ ಪರಾರಿಯಾಗಿದ್ದಾರೆ.
ಏ.9 ರಂದು ವಿದೇಶದಿಂದ ಬರುತ್ತಿದ್ದ ಪೋಷಕರನ್ನು ಸ್ವಾಗತಿಸಲು ರಾಜೀವ್ ಅವರು ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದರು. ಈ ಸಮಯಕ್ಕೆ ಹೊಂಚು ಹಾಕಿದ್ದ ಖದೀಮರು, ಮನೆ ಮುಂಭಾಗದ ಗ್ರಿಲ್ ಮುರಿದು ಮನೆ ಒಳಗೆ ಪ್ರವೇಶಿಸಿ, ಮನೆಯ ಬೀರುವಿನಲ್ಲಿದ್ದ ಹಣ, ಸ್ಟ್ರಾಂಗ್ ರೂಂನಲ್ಲಿ ಇಟ್ಟಿದ್ದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ರಾಜೀವ್, ಕುಟುಂಬ ಸಮೇತ ವಾಪಸ್ ತಮ್ಮ ಮನೆಗೆ ಬಂದಾಗ, ಮನೆಯ ಬಾಗಿಲು ತೆರೆದಿರುವುದನ್ನು ಕಂಡು ಒಳಗೆ ಹೋಗಿ ನೋಡಿದಾಗ, ಕಳ್ಳರ ಕೈಚಳಕ ಗೊತ್ತಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.