ಕರ್ನಾಟಕ

karnataka

ETV Bharat / state

ಕೇಂದ್ರದಲ್ಲಿ ತೃತೀಯ ರಂಗ ರಚನೆಯಾಗಲಿದೆ: ಸಿ‌.ಹೆಚ್​.ವಿಜಯಶಂಕರ್​​ ವಿಶ್ವಾಸ - etv bharat

ಚುನಾವಣೆ ಪೂರ್ವ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಅದೆಷ್ಟೋ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿವೆ. ಮೇ 23ರಂದು ಕಾದು ನೋಡಿ ಎಂದು ಮೈತ್ರಿ ಅಭ್ಯರ್ಥಿ ಸಿ.ಹೆಚ್​.ವಿಜಯಶಂಕರ್ ತಮ್ಮ ಗೆಲುವಿನ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಮೈತ್ರಿ ಅಭ್ಯರ್ಥಿ ಸಿ.ಹೆಚ್​.ವಿಜಯಶಂಕರ್

By

Published : May 21, 2019, 2:07 PM IST

ಮೈಸೂರು:ಕಾಂಗ್ರೆಸ್​ ಹಾಗೂ ತೃತೀಯ ರಂಗ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್​.ವಿಜಯಶಂಕರ್ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜೀವ್​ ಗಾಂಧಿ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ತಿಂಗಳ ಹಿಂದೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿಯೂ ಸಮೀಕ್ಷೆಗಳು ಬಿಜೆಪಿ ಪರವಾಗಿತ್ತು. ಆದರೆ, ಫಲಿತಾಂಶದಂದು ಕಾಂಗ್ರೆಸ್​ ಎಷ್ಟು ಸ್ಥಾನ ಗೆದ್ದಿದೆ ಎಂಬುವುದು ದೇಶದ ಜನರಿಗೆ ಗೊತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಅದೆಷ್ಟೋ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿವೆ. ಮೇ 23ರಂದು ಕಾದು ನೋಡಿ ಎಂದರು.

ಮೈತ್ರಿ ಅಭ್ಯರ್ಥಿ ಸಿ.ಹೆಚ್​.ವಿಜಯಶಂಕರ್

ಕ್ಷೇತ್ರದಲ್ಲಿ ಕೆಲವು ಜೆಡಿಎಸ್ ನಾಯಕರು ತಪ್ಪು ಮಾಡಿದ್ದಾರೆ. ಎಲ್ಲ ಕಡೆ ಈ ರೀತಿ ಆಗಿಲ್ಲ. ಇಲ್ಲಿ ನನ್ನ ಗೆಲುವು ಖಚಿತ. 6 ಬಾರಿ ಲೋಕಸಭಾ ಹಾಗೂ 5 ವಿಧಾನಸಭಾ ಚುನಾವಣೆ ಎದುರಿಸಿದ ವ್ಯಕ್ತಿಗೆ ಜನರ ನಾಡಿ ಮಿಡಿತ ಅರ್ಥವಾಗಿದೆ. ಇನ್ನೊಂದು ದಿನ ಕಾದು ನೋಡಿ ಎಂದಿದ್ದಾರೆ.

ABOUT THE AUTHOR

...view details