ಮೈಸೂರು:ತಲಕಾಡು ನಿಸರ್ಗಧಾಮದಲ್ಲಿ ಈಜಲು ತೆರಳಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಲಕಾಡು: ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು ..! - ನೀರಿನಲ್ಲಿ ಮುಳುಗಿ ಸಾವು
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಮಾಲಾಧಾರಿಯೊಬ್ಬರು ತಲಕಾಡು ನಿಸರ್ಗಧಾಮದಲ್ಲಿ ಈಜುವಾಗ ಸಾವನ್ನಪಿದ್ದಾರೆ.
ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು
ಜಿಲ್ಲೆಯ ಸಂಕೇನಹಳ್ಳಿ ಗ್ರಾಮದ ನಿವಾಸಿ ನಟೇಶ್ (38) ಮೃತ ಮಾಲಾಧಾರಿ. ಸಂಕೇನಹಳ್ಳಿ ಗ್ರಾಮದಿಂದ 48 ಜನರು ಶಬರಿಮಲೆಗೆಂದು ಪ್ರಯಾಣ ಹೊರಟಿದ್ದರು. ಸಾರ್ವಜನಿಕರಿಗೆ ಶಬರಿಮಲೆ ಅನುಮತಿ ನಿರಾಕರಿಸಿರುವ ಹಿನ್ನೆಲೆ ತಲಕಾಡಿಗೆ ಪ್ರವಾಸ ಬಂದಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.