ಕರ್ನಾಟಕ

karnataka

ETV Bharat / state

ಜುಬಿಲಂಟ್​ ಕಾರ್ಖಾನೆಯ ಮೊದಲ ಸೋಂಕಿತನಿಗೆ ವಿದೇಶಿಯರ ಸಂಪರ್ಕ: ಡಾ.ಕೆ.ಸುಧಾಕರ್

ಜುಬಿಲಂಟ್​ ಕಾರ್ಖಾನೆಯಲ್ಲಿ ಕಂಡುಬಂದ ಮೊದಲ ಕೊರೊನಾ ಸೋಂಕಿತನು ಹೊರದೇಶಕ್ಕೆ ಹೋಗಿ ಬಂದಿಲ್ಲ. ಬದಲಾಗಿ, ಹೊರದೇಶದಿಂದ ಬಂದಿದ್ದ ವ್ಯಕ್ತಿಗಳೊಂದಿಗೆ ಸಂಪರ್ಕ ಇತ್ತು ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿರುವುದಾಗಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

The first coronavirus infected in jubilent factory had contact with foreigners
ಜುಬಿಲಿಯೆಂಟ್ ಕಾರ್ಖಾನೆಯ ಮೊದಲ ಕೊರೊನಾ ಸೋಂಕಿತನಿಗೆ ಹೊರದೇಶದವರ ಸಂಪರ್ಕವಿತ್ತು: ಡಾ.ಕೆ.ಸುಧಾಕರ್

By

Published : Apr 21, 2020, 2:54 PM IST

ಮೈಸೂರು: ಜುಬಿಲಂಟ್​ ಕಾರ್ಖಾನೆಯಲ್ಲಿ ಮೊದಲ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ರೋಗಿ ಸಂಖ್ಯೆ 52ರ ವ್ಯಕ್ತಿಗೆ ಹೊರ ದೇಶದವರ ಸಂಪರ್ಕ ಇತ್ತು ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆಯೆಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್​​, ಜುಬಿಲಂಟ್​ ಕಾರ್ಖಾನೆಯಲ್ಲಿ ಕಂಡುಬಂದ ಮೊದಲ ಕೊರೊನಾ ಸೋಂಕಿತನು ಹೊರದೇಶಕ್ಕೆ ಹೋಗಿ ಬಂದಿಲ್ಲ. ಆದ್ರೆ, ಹೊರದೇಶದಿಂದ ಬಂದಿದ್ದ ವ್ಯಕ್ತಿಗಳೊಂದಿಗೆ ಸಂಪರ್ಕ ಇತ್ತೆಂದು ಕೇಂದ್ರ ಇಲಾಖೆ ತಿಳಿಸಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಕೇಂದ್ರ ಇಲಾಖೆ ಸಂಪೂರ್ಣ ವರದಿ ನೀಡಲಿದೆಯೆಂದು ತಿಳಿಸಿದರು.

ಡಾ.ಕೆ.ಸುಧಾಕರ್

ಕೋವಿಡ್-19 ಪರೀಕ್ಷೆಯಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನ ದಲ್ಲಿದ್ದು, ಎರಡನೇ ಸ್ಥಾನದಲ್ಲಿ ಹರಿಯಾಣ ಇದೆ. ಚಿಕಿತ್ಸೆ ವಿಧಾನದ ವೇಗ ಹೆಚ್ಚಿಸಲು ರಾಜ್ಯಕ್ಕೆ ರ್‍ಯಾಪಿಡ್ ಕಿಟ್ ಬರಲಿದೆ ಎಂದು ಹೇಳಿದರು. ಕಲಬುರಗಿಯಲ್ಲಿ ಸೋಮವಾರ ರಾತ್ರಿ ಕೊರೊನಾದಿಂದ 80 ವರ್ಷದ ವೃದ್ಧ ಮೃತಪಟ್ಟಿರುವ ಹಿನ್ನೆಲೆ, ಹಿರಿಯರ ಸುರಕ್ಷತೆಗಾಗಿ ಮಾರ್ಗಸೂಚನೆ ಬಿಡುಗಡೆ ಮಾಡಲಾಗಿದೆ. ಶೇ.56 ಲಕ್ಷ ಮಂದಿ‌ಯಷ್ಟು ವೃದ್ದರಿದ್ದು, ಅವರ ರಕ್ಷಣೆ ಬಹುಮುಖ್ಯ ಎಂದು ತಿಳಿಸಿದರು.

ಇನ್ನೂ, ಪಾದರಾಯನಪುರದಲ್ಲಿ ಗಲಾಟೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅವರೆಲ್ಲ ಮೃಗಗಳ ರೀತಿ ವರ್ತಿಸಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮರು ಕಳುಹಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದರು.

ABOUT THE AUTHOR

...view details