ಕರ್ನಾಟಕ

karnataka

ETV Bharat / state

ದೇಶದ ರೈತರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ: ಜಗ್ಗಿ ವಾಸುದೇವ್ - ಜಗ್ಗಿ ವಾಸುದೇವ್

ದೇಶದಲ್ಲಿ ರೈತರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ.‌ ಅಲ್ಲದೇ ಬೆಳೆಗಳು ಕುಂಠಿತವಾಗುತ್ತಿದೆ ಹೀಗಾದರೆ ರೈತರು ಹೇಗೆ ಸುಧಾರಣೆಯಾಗುತ್ತಾರೆ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.

ಜಗ್ಗಿ ವಾಸುದೇವ್

By

Published : Sep 6, 2019, 4:44 AM IST

ಮೈಸೂರು:ದೇಶದಲ್ಲಿ ರೈತರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ.‌ ಅಲ್ಲದೇ ಬೆಳೆಗಳು ಕುಂಠಿತವಾಗುತ್ತಿದ್ದು, ಹೀಗಾದರೆ ದೇಶದ ರೈತರು ಹೇಗೆ ಸುಧಾರಣೆಯಾಗುತ್ತಾರೆ ಎಂದು ಜಗ್ಗಿ ವಾಸುದೇವ್ ಹೇಳಿದ್ದಾರೆ.

ಜಗ್ಗಿ ವಾಸುದೇವ್

ಜಿಲ್ಲೆಯ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹೀಗಿರುವಾಗ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಮಣ್ಣಿನಲ್ಲಿ ಸತ್ವವಿರುವುದಿಲ್ಲವೆಂದರೆ ಮನುಷ್ಯನಿಗೆ ಶಕ್ತಿ ಇಲ್ಲವಾಗುತ್ತದೆ ಎಂದರು. ಕಾವೇರಿ ಕೂಗಿಗೆ ರೈತರನ್ನು ಆಹ್ವಾನಿಸಿಲ್ಲವೆಂದು ಆರೋಪಕ್ಕೆ ಉತ್ತರಿಸಿದ ಅವರು, ಕಾವೇರಿ ಪ್ರಾದೇಶಿಕ ಪ್ರದೇಶದ ನಗರ ಪ್ರದೇಶಗಳ‌ ನಾಗರಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಈಗಾಗಲೇ ನಮ್ಮ ಸಂಸ್ಥೆಯಿಂದ ಗ್ರಾಮೀಣ ಪ್ರದೇಶಗಳಿಗೆ ವಾಹನ‌ ಕಳುಹಿಸಲಾಗಿದೆ.‌ ಇದರಲ್ಲಿ ಜಾತಿ-ಧರ್ಮ ಬೇಧವಿಲ್ಲದೇ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾಂಬೋಡಿಯಾ, ವಿಯಟ್ನಾಂನಲ್ಲಿ ಬೆಳೆಯುವ ಅರಿಶಿನ ಬೆಳೆಗೆ ಸಾಕಷ್ಟು ಬೇಡಿಕೆ ಇದೆ‌. ಆದರೆ ನಮ್ಮ ದೇಶದಲ್ಲಿ ಬೆಳೆಯುವ ಅರಿಶಿನಕ್ಕೆ ಸತ್ವವಿಲ್ಲವೆಂದು ತಿರಸ್ಕಾರ ಮಾಡಲಾಗುತ್ತದೆ ಎಂದರು.

ಈಗಾಗಲೇ 3.50. ಲಕ್ಷ, ಹಾಗೂ ಗುರುವಾರ 2.70 ಮರ ಕೊಡಲಾಗಿದೆ. ಕಂಗನಾ ರಾವ್ ಅವರು 42 ಲಕ್ಷ ರೂ ನೀಡಿ 1 ಲಕ್ಷ ಮರಗಳನ್ನು ಖರೀದಿ ಮಾಡಿದ್ದಾರೆ ಎಂದು ಹೇಳಿದರು.

ABOUT THE AUTHOR

...view details