ಮೈಸೂರು: ಲಾಕ್‌ಡೌನ್‌ನಿಂದ ನಮಗೂ ಹೆಚ್ಚಿನ ತೊಂದರೆಯಾಗಿದ್ದು, ನಮಗೂ ಸಹಾಯಧನ ನೀಡಿ ಎಂದು ಒತ್ತಾಯಿಸಿ ಮೈಸೂರು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಸಹಾಯಧನ ನೀಡುವಂತೆ ಒತ್ತಾಯ: ಮೈಸೂರಿನಲ್ಲಿ ಟ್ಯಾಕ್ಸಿ ಮಾಲೀಕರು, ಚಾಲಕರಿಂದ ಪ್ರತಿಭಟನೆ - ಟ್ಯಾಕ್ಸಿ ಮಾಲೀಕರು, ಚಾಲಕರಿಂದ ಪ್ರತಿಭಟನೆ
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಚಾಲಕರಿಗೆ ಮಾತ್ರ ಸರ್ಕಾರ ಕೆಲವು ಸವಲತ್ತು ನೀಡಿದೆ. ಆದ್ರೆ ಮೈಸೂರಿನಲ್ಲಿ 2500ಕ್ಕೂ ಹೆಚ್ಚು ನೋಂದಾಯಿಸಿಕೊಳ್ಳದ ಚಾಲಕರಿದ್ದು, ದೆಹಲಿ ಸರ್ಕಾರದ ಮಾದರಿಯಲ್ಲಿ ನಮಗೂ ಸಹಾಯ ಧನ ನೀಡಿ ಎಂದು ಒತ್ತಾಯಿಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸಿದರು.
ನಾಯ್ಡು ನಗರದ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಲಾಕ್ ಡೌನ್ನಿಂದ ಮೈಸೂರಿನಲ್ಲಿ ಟ್ಯಾಕ್ಸಿ ಮಾಲೀಕರು, ಚಾಲಕರ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಪ್ರವಾಸೋದ್ಯಮವನ್ನೇ ನಂಬಿದ್ದವರ ಸ್ಥಿತಿ ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರವಾಸೋದ್ಯಮಕ್ಕೆ ನಮ್ಮಿಂದ ಆದಾಯ ಇದ್ದರೂ, ನಮ್ಮ ಕಡೆ ಸರ್ಕಾರ ಗಮನ ಹರಿಸುತ್ತಿಲ್ಲ. ಪ್ರವಾಸೋದ್ಯಮದಲ್ಲಿ ನೋಂದಾಯಿತ ಚಾಲಕರಿಗೆ ಮಾತ್ರ ಸರ್ಕಾರ ಕೆಲವು ಸವಲತ್ತು ನೀಡಿದೆ. ಆದರೆ ಮೈಸೂರಿನಲ್ಲಿ 2500ಕ್ಕೂ ಹೆಚ್ಚು ನೋಂದಾಯಿಸಿಕೊಳ್ಳದ ಚಾಲಕರಿದ್ದೇವೆ. ದಯಾಮಾಡಿ ಸರ್ಕಾರ ನಮ್ಮ ಕಡೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ದೆಹಲಿ ಸರ್ಕಾರದ ಮಾದರಿಯಲ್ಲಿ ನಮಗೂ ಸಹಾಯ ಧನ ನೀಡಿ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.