ಕರ್ನಾಟಕ

karnataka

ETV Bharat / state

ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿದೆ.. ತೀರ್ಪು ಬಂದಾಗ ನೋಡೋಣ: ಕಾಗೇರಿ

ಸುಪ್ರೀಂಕೋರ್ಟ್​ ತೀರ್ಪು ಬಂದ ಬಳಿಕ ಅನರ್ಹ ಶಾಸಕರ ಬಗ್ಗೆ ಯೋಚಿಸುತ್ತೇನೆ. ಅಲ್ಲಿವರೆಗೂ ಏನು ಮಾತನಾಡಲಾರೆ. ನನ್ನ ಸಭಾಧ್ಯಕ್ಷ ಅವಧಿಯಲ್ಲಿ ನೂತನ ಚಿಂತನೆ, ಜನಪರ ಕಾಳಜಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ರಾಜ್ಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ

By

Published : Sep 14, 2019, 3:31 PM IST

ಮೈಸೂರು:ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿದೆ, ಹೀಗಾಗಿ ನಾನು ಏನು ಹೇಳುವುದಿಲ್ಲ. ಕೋರ್ಟ್​ ತೀರ್ಪು ಬಂದ ನಂತರ ಯಾವ ರೀತಿ ಆದೇಶಿಸುತ್ತಾರೆ ಹಾಗೇ ನಡೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ

ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆಯಲ್ಲಿ ಹೊಸತನ ತರಬೇಕು. ಹೊಸತನವನ್ನು ಪರಿಚಯಿಸಿದ ಕಾರಣಕ್ಕಾಗಿಯೇ ಡಿ.ದೇವರಾಜ ಅರಸು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಹಾಗೇ ಹೊಸ ಶಾಸಕರು, ಜನಪರವಾಗಿ ಚಿಂತನೆಯುಳ್ಳವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ABOUT THE AUTHOR

...view details