ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ಸೈನ್ಸ್ ಸಿಟಿ ನಿರ್ಮಾಣಕ್ಕೆ ಭೂಮಿ ನೀಡಿದ ಸುತ್ತೂರು ಮಠ - ಮೈಸೂರು

ಸೈನ್ಸ್​​ ಸಿಟಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ 25 ಎಕರೆ ಭೂಮಿಯನ್ನು ನೀಡಲು ಸುತ್ತೂರು ಮಠ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸುತ್ತೂರಿಗೆ ಖುದ್ದು ಡಿಸಿಎಂ ಪರಮೇಶ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುತ್ತೂರು ಮಠ

By

Published : Jun 24, 2019, 5:07 PM IST

ಮೈಸೂರು: ಭಾರತ ಸರ್ಕಾರದ ಸೈನ್ಸ್ ಸಿಟಿ ಯೋಜನೆಗೆ ಸುತ್ತೂರಿನಲ್ಲಿ‌ ಡಿಸಿಎಂ ಪರಮೇಶ್ವರ್ ಸ್ಥಳ ಪರಿಶೀಲನೆ ಮಾಡಿ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ರಾಜ್ಯಕ್ಕೆ ಒಂದೊಂದು ಸೈನ್ಸ್ ಸಿಟಿ ಹಾಗೂ 4 ರಿಂದ 5 ರೀಜನಲ್ ಸೆಂಟರ್ ಮಾಡಲು ಯೋಜನೆಯ ಪ್ರಸ್ತಾವನೆ ಇದ್ದು, ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ 25 ಎಕರೆ ಭೂಮಿಯನ್ನು ನೀಡಲು ಸುತ್ತೂರು ಮಠ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸುತ್ತೂರಿಗೆ ಖುದ್ದು ಡಿಸಿಎಂ ಪರಮೇಶ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಡಿಸಿಎಂ ಪರಮೇಶ್ವರ್ ಸುತ್ತೂರು ಶ್ರೀಗಳೊಂದಿಗೆ ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಿಸಿಎಂ ಜಿ.ಪರಮೇಶ್ವರ್

ಸೈನ್ಸ್ ಸಿಟಿಯ ಉದ್ದೇಶವೇನು:

ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಮೂಡಿಸುವುದು ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಈ ತಂತ್ರಜ್ಞಾನವನ್ನು ಹೇಗೆ ಆವರಿಸಿಕೊಂಡಿದೆ ಎಂಬುದನ್ನು ತಿಳಿಸುವ ಗ್ಯಾಲರಿಗಳು, ಜೊತೆಗೆ ಸೈನ್ಸ್​​​ಗೆ ಸಂಬಂಧಿಸಿದ ಶಿಬಿರಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸೆಮಿನಾರ್ ಗಳು ನೂತನ ಆವಿಷ್ಕಾರಗಳ ಪ್ರದರ್ಶನವನ್ನು ಏರ್ಪಡಿಸಲು ಈ‌ ಕೇಂದ್ರವನ್ನು ಬಳಸಿಕೊಳ್ಳಲಾಗುವುದು ಇಲ್ಲಿ ಅವಕಾಶವಿದೆ ಎಂದರು.

ABOUT THE AUTHOR

...view details