ಕರ್ನಾಟಕ

karnataka

ETV Bharat / state

ಮೈಸೂರು: ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು! ವಿಡಿಯೋ - ಮೈಸೂರಿನಲ್ಲಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ಹೋಟೆಲ್​ನಲ್ಲಿ ತಿಂಡಿ ತಿನ್ನುತ್ತಿರುವಾಗಲೇ ವಿದ್ಯಾರ್ಥಿಯೊಬ್ಬರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Student died in Mysore, Student died due to heart attack in Mysore, Mysore news, ಮೈಸೂರಿನಲ್ಲಿ ವಿದ್ಯಾರ್ಥಿ ಸಾವು, ಮೈಸೂರಿನಲ್ಲಿ ತಿಂಡಿ ತಿನ್ನುತ್ತಲೇ ವಿದ್ಯಾರ್ಥಿ ಸಾವು, ಮೈಸೂರಿನಲ್ಲಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು, ಮೈಸೂರು ಸುದ್ದಿ,
ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು

By

Published : Feb 7, 2022, 1:15 PM IST

Updated : Feb 7, 2022, 1:29 PM IST

ಮೈಸೂರು: ಹೋಟೆಲ್​ಗೆ ತಿಂಡಿ ತಿನ್ನಲು ಬಂದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೆಳೆಯನ ಜೊತೆ ಹೋಟೆಲ್​​ಗೆ ಬಂದ ವಿದ್ಯಾರ್ಥಿ ನಿತೀಶ್ ಕುಮಾರ್ (25)​ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿತೀಶ್​ ಕುಮಾರ್​ ಹುಣಸೂರು ತಾಲೂಕಿನ ನಂಜಪುರ ಗ್ರಾಮದ ನಿವಾಸಿಯಾಗಿದ್ದಾರೆ.

ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು

ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಿತೀಶ್​ ಕುಮಾರ್​ ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರು ಪಟ್ಟಣದಲ್ಲಿ ಸ್ನೇಹಿತನ ಜೊತೆ ತಿಂಡಿ ತಿನ್ನಲು ಹೋಟೆಲ್​​ಗೆ ಹೋಗಿದ್ದರು. ಟೇಬಲ್​ ಮೇಲೆ ಕುಳಿತುಕೊಂಡು ತಿಂಡಿಗೆ ಆರ್ಡರ್​ ಮಾಡಿದ್ದಾರೆ.

ಓದಿ:ಕೊರೊನಾಗೆ ಗೆಳೆಯ ಬಲಿ: ಸ್ನೇಹಿತನ ಮಡದಿಗೆ ಬಾಳು ಕೊಟ್ಟ ಚಾಮರಾಜನಗರದ ಯುವಕ

ತಿಂಡಿಗೆ ಆರ್ಡರ್​ ಮಾಡಿ ಸ್ನೇಹಿತನ ಜೊತೆ ಮಾತನಾಡುತ್ತಿರುವಾಗಲೇ ಟೇಬಲ್​ನಲ್ಲಿ ಹಠಾತ್​ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ನಿತೀಶ್​ ಮೃತಪಟ್ಟಿದ್ದಾರೆ. ನಿತೀಶ್​ಗೆ ಹಠಾತ್​ ಹೃದಯಾಘಾತ ಸಂಭವಿಸಿರುವುದರಿಂದ ಮೃತಪಟ್ಟಿದ್ದಾರೆ.

ನಿತೀಶ್​ ಸಾವನ್ನಪ್ಪುತ್ತಿರುವ ಕೊನೆಯ ಕ್ಷಣದ ದೃಶ್ಯ ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಈ ಘಟನೆ ಕುರಿತು ಹುಣಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Feb 7, 2022, 1:29 PM IST

ABOUT THE AUTHOR

...view details