ಕರ್ನಾಟಕ

karnataka

ETV Bharat / state

ಕೊರೊನಾತಂಕದ ನಡುವೆ ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸ ವಿಶೇಷ ಧಾರ್ಮಿಕ ಕೈಂಕರ್ಯ

ಕೊರೊನಾ ಹಿನ್ನೆಲೆ ಭಕ್ತರಿಗೆ ಚಾಮುಂಡಿ ಬೆಟ್ಟಕ್ಕೆ ನಿಷೇಧವಿದ್ದರೂ ದೇವಾಲಯದಲ್ಲಿ ಬೆಳಗಿನ ಜಾವವೇ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ತಾಯಿಗೆ ದುರ್ಗೆ ಅಲಂಕಾರ ಮಾಡುವ ಮೂಲಕ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ASHADA_CHAMUNDI_TEMPLE_POOJA_
ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸ ವಿಶೇಷ ಧಾರ್ಮಿಕ ಕೈಂಕರ್ಯ

By

Published : Jul 10, 2020, 12:38 PM IST

ಮೈಸೂರು: ಜಿಲ್ಲೆಯಲ್ಲಿ 3ನೇ ಆಷಾಢ ಶುಕ್ರವಾರದ ಪ್ರಯುಕ್ತ ತಾಯಿ ಚಾಮುಂಡಿ ದೇವಿಗೆ ದುರ್ಗೆಯ ಅಲಂಕಾರ ಮಾಡಿ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು.

ಚಾಮುಂಡಿಬೆಟ್ಟದಲ್ಲಿ ಆಷಾಢ ಮಾಸ ವಿಶೇಷ ಧಾರ್ಮಿಕ ಕೈಂಕರ್ಯ
ಕೊರೊನಾ ಹಿನ್ನೆಲೆ ಭಕ್ತರಿಗೆ ಚಾಮುಂಡಿ ಬೆಟ್ಟಕ್ಕೆ ನಿಷೇಧವಿದ್ದರೂ ದೇವಾಲಯದಲ್ಲಿ ಬೆಳಗಿನ ಜಾವವೇ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ತಾಯಿಗೆ ದುರ್ಗೆ ಅಲಂಕಾರ ಮಾಡುವ ಮೂಲಕ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು.

13ನೇ ತಾರೀಖು ಚಾಮುಂಡಿ ತಾಯಿಯ ವರ್ಧಂತಿ ಉತ್ಸವ ನಡೆಯಲಿದ್ದು, ಅಂದು ಎಂದಿನಂತೆ ಪೂಜಾ ಕೈಂಕರ್ಯಗಳು ನಡೆಯಲಿವೆ. ಸರ್ಕಾರಿ ಆದೇಶದಂತೆ ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ಮತ್ತು ಮಂಗಳವಾರ ಈ 5 ದಿನ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಇಲ್ಲ. ದೇವಾಲಯಕ್ಕೆ ನಿಷೇಧವಿದ್ದರೂ ಹೆಚ್ಚಿನ ಜನ ಬರುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹಾಗಾಗಿ ತಾವು ಮನೆಯಲ್ಲೇ ಇದ್ದು ಪೂಜೆ ಸಲ್ಲಿಸಿ ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮನವಿ ಮಾಡಿದರು.

ABOUT THE AUTHOR

...view details