ಕರ್ನಾಟಕ

karnataka

ETV Bharat / state

ಮದ್ಯ ಕುಡಿಯಲು ಹಣ ನೀಡದ್ದಕ್ಕೆ ಸಿಟ್ಟು.. ಮೈಸೂರಲ್ಲಿ ಸಾಕು ತಾಯಿಯನ್ನ ಕೊಚ್ಚಿ ಕೊಂದ ಮಗ! - Refusal to drink son who killed a foster mother

ಮದ್ಯಕ್ಕೆ ದಾಸನಾಗಿದ್ದ ಯುವಕ-ಹಣ ನೀಡದ ಸಾಕುತಾಯಿಯನ್ನು ಕೊಚ್ಚಿ ಕೊಂದ ಮಗ-ಮೈಸೂರಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ ಘಟನೆ.

son-who-killed-his-foster-mother-at-mysore
ಕುಡಿಯುವುದಕ್ಕೆ ಹಣ ನಿರಾಕರಣೆ : ಸಾಕು ತಾಯಿಯನ್ನೇ ಕೊಂದ ಮಗ

By

Published : Jun 30, 2022, 3:12 PM IST

ಮೈಸೂರು: ಮದ್ಯಪಾನ ಮಾಡಲು ಹಣ ನೀಡದ್ದಕ್ಕೆ ಆಕ್ರೋಶಗೊಂಡ ಮಗನೋರ್ವ ಸಾಕು ತಾಯಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕೊಪ್ಪ ಗ್ರಾಮ ಪಂಚಾಯತ್​ ವ್ಯಾಪ್ತಿಯ ಗುಡ್ಡೇನಹಳ್ಳಿ ಗ್ರಾಮದ ಸೂಸಾ ಮೇರಿ (81) ಮೃತ ವೃದ್ಧೆ ಎಂದು ತಿಳಿದುಬಂದಿದೆ. ಕೊಲೆಗೈದ ಆರೋಪಿಯನ್ನು ಮಾರ್ಟಿನ್ ದೇವನ್(33) ಎಂದು ಗುರುತಿಸಲಾಗಿದೆ.

ಮೃತ ವೃದ್ಧೆ ಮಕ್ಕಳಿಲ್ಲದ ಕಾರಣ ಮಾರ್ಟಿನ್ ದೇವನ್ ಎಂಬವರನ್ನು ಚಿಕ್ಕವನಿರುವಾಗಲೇ ದತ್ತುಮಗನಾಗಿ ಪಡೆದುಕೊಂಡಿದ್ದರು. ಈತ ಕುಡಿತದ ಚಟಕ್ಕೆ ದಾಸನಾಗಿದ್ದ. ಅಲ್ಲದೆ, ಹಣಕ್ಕಾಗಿ ವೃದ್ಧೆಯನ್ನು ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಗಲಾಟೆಯಾಗಿ ಮಚ್ಚಿನಿಂದ ಸಾಕು ತಾಯಿಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಬೈಲಕುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಓದಿ :ಗಾಂಜಾ ಸೇವಿಸುವಾಗ ಪೊಲೀಸರ ದಾಳಿ: ಎಸ್ಕೇಪ್​ ಆಗಲು ಯತ್ನಿಸಿ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವು..!

ABOUT THE AUTHOR

...view details