ಮೈಸೂರು :ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಗನೊಬ್ಬ ತಂದೆಯ ಮೇಲೆಯೇ ಏರ್ಗನ್ನಿಂದ ಗುಂಡು ಹಾರಿಸಿರುವ ಘಟನೆ ಮೈಸೂರು ಜಿಲ್ಲೆ ವಿಜಯನಗರದ 3ನೇ ಹಂತದಲ್ಲಿ ಭಾನುವಾರ ನಡೆದಿದೆ.
ಶಿವಕುಮಾರ್ (50) ಎಂಬುವರು ಹಲ್ಲೆಗೊಳಗಾದವರು. ಇವರ ವಿರುದ್ಧ ನಗರದ ಹೊರವಲಯದಲ್ಲಿ ಪತ್ತೆಯಾದ 'ನಕಲಿ ನಂದಿನಿ ತುಪ್ಪ' ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಕೇಳಿ ಬಂದಿತ್ತು.
ಮೊದಲಿನಿಂದಲೂ ಶಿವಕುಮಾರ್, ಅವರ ಪತ್ನಿ ವನಿತಾ ಹಾಗೂ ಪುತ್ರ ಮೃಣಾಲ್ (21) ಎಂಬುವರ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದವು. 'ನಕಲಿ ನಂದಿನಿ ತುಪ್ಪ' ಪ್ರಕರಣ ಬಯಲಾದ ಮೇಲೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕಾರಣಕ್ಕಾಗಿ ಅವರು ತಲೆಮರೆಸಿಕೊಂಡಿದ್ದರು.