ಕರ್ನಾಟಕ

karnataka

ಕಾಲು ಜಾರಿ ಬಿದ್ದ ಗಾನಕೋಗಿಲೆ.. ಖಾಸಗಿ ಆಸ್ಪತ್ರೆಗೆ ಎಸ್‌.ಜಾನಕಿ ದಾಖಲು!

By

Published : May 4, 2019, 2:56 PM IST

ಇಂದು ಮುಂಜಾನೆ ಬಹುಭಾಷಾ ಗಾಯಕಿ ಎಸ್.ಜಾನಕಿ ಅವರು ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಸೊಂಟದ ಮೂಳೆ ಮುರಿದಿದೆ.

ಚಿತ್ರಕೃಪೆ : ಟ್ವಿಟ್ಟರ್​

ಮೈಸೂರು : ಆಕಸ್ಮಿಕವಾಗಿ ಕೆಳಗೆ ಬಿದ್ದ ಪರಿಣಾಮ ಗಾನಕೋಗಿಲೆ ಎಸ್.ಜಾನಕಿ ಸೊಂಟ ಮುರಿದಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದಲ್ಲಿರುವ ಸಂಬಂಧಿಕರ ಮನೆಗೆ ವಿಶ್ರಾಂತಿಗಾಗಿ ಬಂದಿದ್ದ ಅವರು, ಇಂದು ಮುಂಜಾನೆ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಸೊಂಟದ ಮೂಳೆ ಮುರಿದಿದೆ. ಕೂಡಲೇ ಜಾನಕಿ ಅವರನ್ನು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಎರಡ್ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details