ಕರ್ನಾಟಕ

karnataka

ETV Bharat / state

ಆತ್ಮೀಯರ ಜೊತೆ ಬೆಳಗ್ಗೆ ಸಿದ್ದರಾಮಯ್ಯ ವಾಯು ವಿಹಾರ: ಮನೆಯಲ್ಲಿ ಪಾಲಿಕೆ ಸದಸ್ಯರ ಸಭೆ - siddarmaiah meeting at home

ಸದ್ಯ ಮೈಸೂರಿನಲ್ಲಿರುವ ಸಿದ್ದರಾಮಯ್ಯ ಇಂದು ಆತ್ಮೀಯರ ಜೊತೆ ಕೆಲಕಾಲ ವಾಕಿಂಗ್​ ಮಾಡಿದ್ದಾರೆ. ನಂತರ ಮನೆಯಲ್ಲಿಯೇ ಮೇಯರ್ ಚುನಾವಣೆ ಕುರಿತು ಪಾಲಿಕೆ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ.

siddaramaiah walking with closed ones in mysore
ಆತ್ಮೀಯರ ಜೊತೆ ಸಿದ್ದರಾಮಯ್ಯ ವಾಕಿಂಗ್​

By

Published : Feb 20, 2021, 11:56 AM IST

Updated : Feb 20, 2021, 12:32 PM IST

ಮೈಸೂರು : ಮೂರು ದಿನಗಳ ಕಾಲ ತವರು ಜಿಲ್ಲೆಯ ಪ್ರವಾಸದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ಸ್ನೇಹಿತರ ಜೊತೆ ವಾಯು ವಿಹಾರ ನಡೆಸಿ , ತಮ್ಮ ಮನೆಯಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಸಿದರು.

ಮೈಸೂರಿನಲ್ಲಿ ಸಿದ್ದರಾಮಯ್ಯ
ಮೈಸೂರಿನ ರಾಮಕೃಷ್ಣನಗರದ ಐ ಬ್ಲಾಕ್​ನಲ್ಲಿರುವ ಉದ್ಯಾನವನದಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ವಾಯುವಿಹಾರ ನಡೆಸಿ ವ್ಯಾಯಾಮ‌ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಾಗ, ಎಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಮನೆಯ ಕಡೆ ತೆರಳಿದರು.
ಮೇಯರ್ ಚುನಾವಣೆ: ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪಾಲಿಕೆ ಸದಸ್ಯರು:

ಫೆ. 24 ರಂದು ಮೈಸೂರು ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ನಗರ ಪಾಲಿಕೆ ಸದಸ್ಯರು ಭೇಟಿ ಮಾಡಿ ಚರ್ಚಿಸಿದರು. ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರ ಜೊತೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಸುವ ಬಗ್ಗೆ ಪಾಲಿಕೆ ಸದಸ್ಯರ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ. ಈ ಹಿಂದೆ ಯಾರ ಜೊತೆಯೂ ಮೈತ್ರಿ ಇಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದರೆ, ಮೈತ್ರಿ ಮುಂದುವರೆಸಲು ಶಾಸಕ ತನ್ವೀರ್ ಸೇಠ್ ಸೇರಿ ಸ್ಥಳೀಯ ಮುಖಂಡರು ಒಲವು ತೋರಿದ್ದಾರೆ.

ಪಾಲಿಕೆ ಸದಸ್ಯರ ಜೊತೆ ಸಿದ್ದರಾಮಯ್ಯ ಚರ್ಚೆ

ಈ ವೇಳೆ ಮಾಜಿ ಸಚಿವರಾದ ಜಮೀರ್ ಅಹಮ್ಮದ್, ಶಾಸಕರಾದ ತನ್ವೀರ್ ಸೇಠ್, ಧರ್ಮಸೇನ್, ಪಕ್ಷದ ಮೈಸೂರು ಘಟಕದ ಅಧ್ಯಕ್ಷ ಮೂರ್ತಿ ಮತ್ತಿತರರ ಉಪಸ್ಥಿತಿ ಇದ್ದರು.

Last Updated : Feb 20, 2021, 12:32 PM IST

ABOUT THE AUTHOR

...view details