ಮೈಸೂರು: ರಾಜ್ಯ ಸರ್ಕಾರ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತಸವಾಗಲಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಬಂಧ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಫಿಲ್ಮ್ ಸಿಟಿಗೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟರೆ ಸಂತೋಷವಾಗುತ್ತದೆ. ಆದರೆ, ಕುಟುಂಬ ಸದಸ್ಯನಾಗಿ ನಾನು ಆ ರೀತಿ ಒತ್ತಾಯ ಮಾಡುವುದಿಲ್ಲ. ಚಿತ್ರರಂಗಕ್ಕೆ ದುಡಿದ ಸಾಕಷ್ಟು ಮಂದಿ ಇದ್ದಾರೆ. ಅವರ ಹೆಸರನ್ನು ಸಹ ಇಡಬಹುದು. ಯಾರ ಹೆಸರಿಟ್ಟರೂ ಸಹ ಸಂತೋಷವಾಗುತ್ತದೆ. ಅಭಿಮಾನಿಗಳು ಅಭಿಮಾನದಿಂದ ಅಪ್ಪು ಹೆಸರಿಡುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.