ಮೈಸೂರು:ನಂಜನಗೂಡು-ಊಟಿ ರಸ್ತೆಯ ಮಲ್ಲನಮೂಲೆ ಮಠ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಸೆಲ್ಫಿ ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ.
ಕಬಿನಿ ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ ನೀರು ಹೊರ ಬಿಡುತ್ತಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಲ್ಲನಮೂಲೆ ಮಠದ ಬಳಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಬಂಚಳ್ಳಿಹುಂಡಿಯಲ್ಲಿ ವಾಹನ ಸವಾರರು ತೆರಳದಂತೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ.
ಪೊಲೀಸರ ಸೂಚನೆ ಮೀರಿ ಸೆಲ್ಫಿಗಾಗಿ ಮುನ್ನುಗ್ಗುತ್ತಿರುವ ಜನ ಕೆಲ ಸ್ಥಳೀಯರು ರಸ್ತೆಗೆ ಬಂದು ಸೆಲ್ಫಿ ತೆಗೆದುಕೊಳ್ಳಲು ಹಾಗೂ ಫೋಟೊ ತೆಗೆಸಿಕೊಳ್ಳಲು ನೀರಿನ ಮಧ್ಯಕ್ಕೆ ಹೋಗುತ್ತಿದ್ದಾರೆ. ನೀರಿನ ಬಳಿ ಸುಳಿಯದಂತೆ ಪೊಲೀಸರು ಎಚ್ಚರಿಕೆ ನೀಡಿದರೂ ಸೆಲ್ಫಿ ಹಾಗೂ ಫೋಟೊ ಕ್ರೇಜ್ ಇರುವವರು ಮಾತ್ರ ಇದ್ಯಾವುದನ್ನು ಲೆಕ್ಕಿಸದೇ ಮುನ್ನುಗುತ್ತಿದ್ದಾರೆ.
ಗ್ರಾನೈಟ್ ವ್ಯಾಪಾರಿಗಳಿಗೆ ಭಾರಿ ಹೊಡೆತ:
ಮಲ್ಲನಮೂಲೆ ಮಠದ ಸಮೀಪ ಗ್ರಾನೈಟ್ ಹಾಗೂ ಮಾರ್ಬಲ್ ಕಲ್ಲುಗಳನ್ನು ಮಾರುವ ವ್ಯಾಪಾರಿಗಳಿಗೆ ಕಬಿನಿ ಜಲಾಶಯದ ನೀರಿನ ಏರಿಕೆ ಭಾರಿ ಹೊಡೆತ ಕೊಟ್ಟಿದೆ. ತಮ್ಮ ಕಚೇರಿಗಳನ್ನು ಮುಚ್ಚಿದ್ದಾರೆ.