ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯ ಪ್ಲಾನ್ ಯಶಸ್ವಿಯಾಗಲಿಲ್ಲ, ಹಾಗಾಗಿ ಸರ್ಕಾರ ಅಲ್ಪಾವಧಿ ಎನ್ನುತ್ತಿದ್ದಾರೆ'​ - Minister S T Somashekahar News

ಸಿದ್ದರಾಮಯ್ಯ ಪ್ಲಾನ್ ಯಶಸ್ವಿಯಾಗಲಿಲ್ಲ. ಹೀಗಾಗಿ ಅವರು ಸರ್ಕಾರ ಅಲ್ಪಾವಧಿ ಎಂದು ಹೇಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

s-t-somashekahar
ಸಚಿವ ಎಸ್.ಟಿ ಸೋಮಶೇಖರ್

By

Published : Aug 15, 2021, 2:22 PM IST

ಮೈಸೂರು:ರಾಜ್ಯದಲ್ಲಿಸಿಎಂ ಬದಲಾದಾಗ ಸಿದ್ದರಾಮಯ್ಯ ಬೇರೆ ಬೇರೆ ಪ್ಲ್ಯಾನ್​​ ಮಾಡಿದ್ದರು. ಆದರೆ ಅವರು ಯಶಸ್ವಿಯಾಗಲಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಿದ್ದರಾಮಯ್ಯ ಪ್ಲಾನ್ ಯಶಸ್ವಿಯಾಗಲಿಲ್ಲ. ಹೀಗಾಗಿ ಅವರು ಸರ್ಕಾರ ಅಲ್ಪಾವಧಿ ಎಂದು ಹೇಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನಗಳು ಬೇಡ ಎಂದರು.

ಸಿಎಂ ಬಗ್ಗೆ ಮಾತನಾಡಲು ಸಿದ್ದರಾಮಯ್ಯಗೆ ವಿಷಯಗಳೇ ಇಲ್ಲ. ಒಂದಿಬ್ಬರ ಹೇಳಿಕೆಯನ್ನು ಹಿಡಿದುಕೊಂಡು ಸರ್ಕಾರದ ಸ್ಥಿರತೆ ಬಗ್ಗೆ ಮಾಧ್ಯಮದವರು ಚರ್ಚೆ ಮಾಡುವುದು ಬೇಡ. ಸಿಎಂ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಬುದ್ದಿವಂತಿಕೆ ಹೊಂದಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್

ಶಾಸಕ ಎಸ್.ಎ.ರಾಮದಾಸ್ ಹಿರಿಯರಿದ್ದಾರೆ. ಅವರು ಸರ್ಕಾರಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ನಾನು ಮೊದಲ ಅವಧಿ ಮುಗಿದ ಮೇಲೆ ಮೈಸೂರಿಗೆ ಧನ್ಯತಾ ಪತ್ರ ಬರೆದಿದ್ದೆ. ಆದ್ರೆ ರಾಜಕಾರಣ ಕೆಲವೊಮ್ಮೆ ಬದಲಾಗುತ್ತದೆ. ಈಗ ಮತ್ತೆ ಅವಕಾಶ ಸಿಕ್ಕಿದೆ. ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುವೆ. ನಮ್ಮಿಂದ ಎಂದೂ ಅವರಿಗೆ ತೊಂದರೆ ಆಗುವುದಿಲ್ಲ ಎಂದರು‌.

ದಸರಾ ಕುರಿತು ಸಭೆ: ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಮೈಸೂರು ಜನಪ್ರತಿನಿಧಿಗಳ ಮೊದಲ ಸಭೆ ಕರೆಯುತ್ತೇನೆ. ಸಭೆಯಲ್ಲಿ ಯಾವ ರೀತಿಯಾಗಿ ಸರಳ ದಸರಾ ಮಾಡಬೇಕು ಅನ್ನುವ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ನಂತರ ಸಿಎಂ ಜೊತೆ ಚರ್ಚೆ ಮಾಡಿ ಹೈಪವರ್ ಕಮಿಟಿ ಕರೆಯುತ್ತೇವೆ ಎಂದು ಹೇಳಿದರು‌‌.

ಕೊರೊನಾ ನಿರ್ವಹಣೆ:ಕೋವಿಡ್ ನಿರ್ವಹಣೆಗೆ ನಮ್ಮ ಮೊದಲ ಆದ್ಯತೆ. ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡು, ಅದರ ನಡುವೆಯೇ ಸುರಕ್ಷತೆಯಿಂದ ದಸರಾ ಮಾಡಬೇಕಿದೆ‌. ಕೋವಿಡ್ ಅಲೆಯ ಏರಿಳಿತ ಗಮನಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details