ಮೈಸೂರು: ಕೋವಿಡ್ ಕಾರಣ ತಾನು ಬೆಳೆದ ಸಿಹಿಗುಂಬಳಕಾಯಿಯನ್ನು ಯಾರೂ ಕೊಂಡುಕೊಳ್ಳಲು ಮುಂದಾಗುತ್ತಿಲ್ಲ, ಹೀಗಾಗಿ ಸೂಕ್ತ ಬೆಲೆ ಸಿಗುತ್ತಿಲ್ಲ. ಜನರು ತನ್ನ ಬೆಳೆಯನ್ನು ಖರೀದಿಸಿ ಸಹಾಯಕ್ಕೆ ಬರಬೇಕೆಂದು ಮೈಸೂರು ಭಾಗದ ರೈತನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ವಿಡಿಯೋ ಮೂಲಕ ಮನವಿ ಮಾಡಿದ ರೈತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಾವುಡುಗೆರೆ ಹೋಬಳಿಯ ಉಳ್ಯಾಳು ಗ್ರಾಮದ ರೈತ, ಸುಮಾರು 4 ಎಕರೆಯಲ್ಲಿ ಸಿಹಿಗುಂಬಳಕಾಯಿ ಬೆಳೆದಿದ್ದು, ಸದ್ಯ 20 ಟನ್ನಷ್ಟು ಬೆಳೆಯಾಗಿದೆ.
"ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಕೃಷಿ ಮಾಡಿದ್ದು, ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೋವಿಡ್ ಸಮಯವಾದ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ, ಇದನ್ನು ಯಾರೂ ಸಹ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಹಾಗಾಗಿ ದಾನಿಗಳು ಅಥವಾ ಆರ್ಥಿಕವಾಗಿ ಸಬಲರಾಗಿರುವವರು ಕಡಿಮೆ ಬೆಲೆಗೆ ಕೊಂಡುಕೊಳ್ಳಿ. ಬಡವರಿಗೆ ಸಹಾಯವಾಗುತ್ತದೆ." ಎಂದು ಮನವಿ ಮಾಡಿದ್ದಾರೆ. ಆಸಕ್ತರು ಅವರ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.
ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 9945175961
ಇದನ್ನೂ ಓದಿ:ವ್ಯಾಕ್ಸಿನ್ಗಾಗಿ ಕೆ.ಸಿ.ಜನರಲ್ ಆಸ್ಪತ್ರೆಯೆದುರು ಜನರ ಸಾಲು