ಮೈಸೂರು:ಆಹಾರ ಹಾಗೂ ಮೆಡಿಸಿನ್ ಪದಾರ್ಥಗಳನ್ನು ಬಿಟ್ಟು, ನೆರೆ ಸಂತ್ರಸ್ತರಿಗೆ ಇಂತಹ ವಸ್ತುಗಳನ್ನು ನೀಡಬೇಕು ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಅದರಂತೆ ದಾನಿಗಳು ನೀಡಿದರೆ ಅನುಕೂಲವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಪೂರ್ಣಿಮ ಮನವಿ ಮಾಡಿದ್ದಾರೆ.
ಜಲದರ್ಶಿನಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಇಂತಹ ವಸ್ತುಗಳನ್ನು ನೀಡಬೇಕು ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದೆ. ಅದರಂತೆ ದಾನಿಗಳು ನೀಡಿದರೆ ಅನುಕೂಲವಾಗಲಿದೆ. ಆಹಾರ ಹಾಗೂ ಔಷಧಗಳನ್ನು ಸಂಘ ಸಂಸ್ಥೆ ವಹಿಸಿಕೊಂಡಿದೆ. ಜನರಿಗೆ ಅಗತ್ಯ ವಸ್ತುಗಳನ್ನು ನೀಡಿ, ನಗರದ ಪುರಭವನದಲ್ಲಿ ವಸ್ತುಗಳನ್ನು ಸ್ವೀಕರಿಸಿ, ಸಂತ್ರಸ್ತರಿಗೆ ನೀಡಲಾಗುವುದು ಎಂದರು. ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್ ಮಾತನಾಡಿ, ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ತಂಡ ರಚನೆ ಮಾಡಲಾಗಿದೆ ಎಂದರು.
ಇನ್ನು, ಮಳೆ ಅಬ್ಬರದಿಂದ ಮೈಸೂರು ಜಿಲ್ಲೆಯಲ್ಲಿ 1072 ಮಂದಿ ಸಂತ್ರಸ್ತರಾದರೆ, 467 ಎಕರೆ ಪ್ರದೇಶ ಬೆಳೆ ಹಾನಿ ಹಾಗೂ 452 ಮನೆಗಳು ಹಾನಿಯಾಗಿವೆ.