ಕರ್ನಾಟಕ

karnataka

ETV Bharat / state

ನಿರ್ಮಲಾನಂದ ಸ್ವಾಮೀಜಿಗಳಲ್ಲಿ ಕ್ಷಮೆ ಯಾಚಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಧ್ಯಮ ಹೇಳಿಕೆ ನೀಡಿದ್ದರ ಬಗ್ಗೆ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ಮಾಡಿದ ಹಿನ್ನೆಲೆ ನಿರ್ಮಲಾನಂದ ಸ್ವಾಮೀಜಿಗಳಲ್ಲಿ ಕ್ಷಮೆ ಕೇಳಿದ್ದಾರೆ.

addanda kariappa
ಅಡ್ಡಂಡ ಕಾರ್ಯಪ್ಪ

By

Published : Mar 24, 2023, 3:01 PM IST

Updated : Mar 24, 2023, 4:09 PM IST

ಅಡ್ಡಂಡ ಕಾರ್ಯಪ್ಪ

ಮೈಸೂರು: ಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಲಘುವಾಗಿ ಮಾತನಾಡಿದ್ದಾರೆಂದು ಒಕ್ಕಲಿಗ ಸಂಘದ ವಿವಿಧ ಸಂಘಟನೆಗಳು ಇಂದು ರಂಗಾಯಣದ ಮುಂದೆ ಪ್ರತಿಭಟನೆ ನಡೆಸಿದವು. ಈ ಬೆನ್ನಲ್ಲೇ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಶ್ರೀಗಳ ಬಗ್ಗೆ ನನಗೆ ಆಪಾರ ಗೌರವ ಇದೆ. ನಾನು ಶ್ರೀ ಗಳ ಬಗ್ಗೆ ಲಘುವಾಗಿ ಮಾತನಾಡಿಲ್ಲ, ಆದರೂ ನನ್ನ ಹೇಳಿಕೆಯನ್ನು ತಿರುಚಲಾಗಿದ್ದು. ಈ ಬಗ್ಗೆ ಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳಿಗೆ ಕ್ಷಮೆ ಯಾಚಿಸುತ್ತೇನೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಯವರ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲಘುವಾಗಿ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನ ವಿವಿಧ ಒಕ್ಕಲಿಗ ಸಂಘಟನೆಗಳ ಮುಖಂಡರು ರಂಗಾಯಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು. ಅಡ್ಡಂಡ ಕಾರ್ಯಪ್ಪ ಕ್ಷಮೆ ಯಾಚಿಸಬೇಕೆಂದು ರಂಗಾಯಣ ಗೇಟ್ ಬಳಿ‌ ಪ್ರತಿಭಟನೆ ನಡೆಸಿದರು. ಈ ವೇಳೆ ಪೋಲಿಸರು ಪ್ರತಿಭಟನಾಕಾರರನ್ನು ತಡೆದರು. ಪ್ರತಿಭಟನಾಕಾರರು ರಂಗಾಯಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿ, ವಿರೋಧ ವ್ಯಕ್ತಪಡಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ರಂಗಾಯಣ ಹಾಗೂ ಕಲಾಮಂದಿರದ ಎಲ್ಲಾ ಗೇಟ್​ಗಳನ್ನು ಬಂದ್ ಮಾಡಲಾಗಿತ್ತು.

ಇದನ್ನೂ ಓದಿ:ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣದಿಂದ ಸಚಿವ ಮುನಿರತ್ನ ಯು-ಟರ್ನ್!

ಕ್ಷಮೆ ಯಾಚಿಸಿದ ರಂಗಾಯಣ ನಿರ್ದೇಶಕರು: ನಿರ್ಮಲಾನಂದ ಶ್ರೀಗಳು ಈ ನಾಡಿನ ಸಂತರಲ್ಲಿ ಒಬ್ಬರು. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ನಾನು ಹೇಳಿರುವ ಹೇಳಿಕೆಯನ್ನು ಮಾಧ್ಯಮಗಳು ತಮಗೆ ಬೇಕಾದ ರೀತಿಯಲ್ಲಿ ತಿರುಚಿವೆ. ಆದರೂ ನಿರ್ಮಲಾನಂದ ಶ್ರೀಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿ ಲಘು ಹೇಳಿಕೆ ಅಥವಾ ಅಪಮಾನ ಮಾಡುವಂತ ಹೇಳಿಕೆಗಳನ್ನು ನೀಡಿಲ್ಲ, ಅವರಿಗೆ ಅಪಮಾನ ಮಾಡಿಲ್ಲ, ಇದನ್ನು ರಾಜಕೀಯವಾಗಿ ಬಳಸುಕೊಂಡಿದ್ದಾರೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ಒಕ್ಕಲಿಗ ಸಂಘದ ವಿವಿಧ ಸಂಘಟನೆಗಳಿಂದ ಮೈಸೂರು ರಂಗಾಯಣದ ಮುಂದೆ ಪ್ರತಿಭಟನೆ

ನಾನು ನಿರ್ಮಲಾನಂದ ಶ್ರೀಗಳ ಪರಮ ಭಕ್ತ, ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ, ನಾನು ಒಕ್ಕಲಿಗ ವಿರೋಧಿ ಅಲ್ಲ, ರಾಜಕೀಯವಾಗಿ ಈ ವಿಚಾರ ಎಳೆಯುವುದು ಸರಿಯಲ್ಲ. ರಂಗಾಯಣದ ಮುಂದೆ ಪ್ರತಿಭಟನೆ ಮಾಡುವವರ ಕ್ಷಮೆ ಕೇಳುವುದಿಲ್ಲ, ಶ್ರೀಗಳಲ್ಲಿ ಮಾತ್ರ ಕ್ಷಮೆ ಯಾಚಿಸುತ್ತೇನೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

"ಮಾಧ್ಯಮವೊಂದರಲ್ಲಿ ಮಾತನಾಡುವಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ವಾಮೀಜಿಗಳು ಡಿಕೆ ಶಿವಕುಮಾರ್​ಗೆ ಬೆಂಬಲ ಸೂಚಿಸುವಂತೆ ಸಲಹೆ ನೀಡಿದ್ದರು ಎಂಬ ಪತ್ರಿಕಾ ವರದಿ ಆಧಾರವಾಗಿ ನಾನು ಮಾತನಾಡಿದ್ದೆ" ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಸಚಿವ ಮುನಿರತ್ನ ಅವರನ್ನು ಕರೆಸಿ ನಿರ್ಮಲಾನಂದ ಶ್ರೀಗಳು ಮಾತನಾಡಿದ್ದಾರೆ : ಸಚಿವ ಆರ್​ ಅಶೋಕ್

Last Updated : Mar 24, 2023, 4:09 PM IST

ABOUT THE AUTHOR

...view details