ಕರ್ನಾಟಕ

karnataka

ETV Bharat / state

ಮೈಸೂರು: ದೇವರ ಕೋಣೆ ಸೇರಿಕೊಂಡಿದ್ದ ನಾಗಪ್ಪ - ವಿಡಿಯೋ - ದೇವರ ಕೋಣೆಯಲ್ಲಿ ನಾಗರ ಹಾವು

ಬೋಗಾದಿಯ ತೋಂಟದಾರ್ಯ ಎಂಬುವರ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವು ಸೇರಿಕೊಂಡಿತ್ತು. ಇದನ್ನು ಕಂಡ ತೋಂಟದಾರ್ಯ ಅವರು ಉರಗತಜ್ಞ ಸ್ನೇಕ್ ಶ್ಯಾಮ್​​ಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ​​ಸ್ನೇಕ್ ಶ್ಯಾಮ್ ಸ್ಥಳಕ್ಕಾಗಮಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

protection of snake in mysore
ಮೈಸೂರು: ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ನಾಗಪ್ಪನ ರಕ್ಷಣೆ

By

Published : Nov 25, 2020, 10:00 AM IST

ಮೈಸೂರು: ಬೋಗಾದಿಯ ಯಶೋಧರ ನಗರದ ಮನೆಯೊಂದರ ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಮಧ್ಯರಾತ್ರಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ನಾಗಪ್ಪನ ರಕ್ಷಣೆ

ಬೋಗಾದಿಯ ತೋಂಟದಾರ್ಯ ಎಂಬುವರ ಮನೆಯ ದೇವರ ಕೋಣೆಯಲ್ಲಿ ನಾಗರಹಾವು ಸೇರಿಕೊಂಡಿತ್ತು. ತೋಂಟದಾರ್ಯ ದಂಪತಿ ಊಟ ಮುಗಿಸಿ ನಿದ್ರೆಗೆ ಜಾರುವ ಮುನ್ನ ದೇವರಿಗೆ ನಮಸ್ಕರಿಸಲು ದೇವರ ಕೋಣೆ ಬಾಗಿಲು ತೆರೆದಾಗ ನಾಗಪ್ಪ ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ದೇವರ ಬಳಿ ಹೆಡೆ ಎತ್ತಿ ಬುಸುಗುಡುತ್ತಾ ಕುಳಿತಿತ್ತು.

ಭೀಕರ ರಸ್ತೆ ಅಪಘಾತ: ಚಿಕಿತ್ಸೆಗೆ ಎಂದು ಹೊರಟು ಚಿರನಿದ್ರೆಗೆ ಜಾರಿದ ನಾಲ್ವರು

ಇದನ್ನು ಕಂಡ ತೋಂಟದಾರ್ಯ ಅವರು ತಕ್ಷಣ ಸ್ನೇಕ್ ಶ್ಯಾಮ್ ಅವರಿಗೆ ಕರೆಮಾಡಿದ್ದಾರೆ. ಆ ಕೂಡಲೇ ಸ್ಥಳಕ್ಕಾಗಮಿಸಿದ ಉರಗತಜ್ಞ ಸ್ನೇಕ್ ಶ್ಯಾಮ್​​​ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಮನೆಯವರ ಆತಂಕ ನಿವಾರಿಸಿದ್ದಾರೆ.

ABOUT THE AUTHOR

...view details