ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ 5 ವರ್ಷ ರಾಜ್ಯವಾಳಿದ ಹಿರಿಯರೆಂದು ಕಾಲಿಗೆ ಬಿದ್ದೆ ಅಷ್ಟೇ.. ಕುಲಸಚಿವ ಪ್ರೊ.ಶಿವಪ್ಪ - Mysore University

ನಾನು ಒಬ್ಬ ಅಧಿಕಾರಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ, ಸಾಮಾನ್ಯನಂತೆ ಹೋಗಿದ್ದೆ. ಹಿರಿಯರಿಗೆ ಗೌರವ ಕೊಟ್ಟಿದ್ದೀನಿ ಅಷ್ಟೇ.. ಇದರಲ್ಲಿ ಯಾವುದೇ ರಾಜಕೀಯ ಬೇಡ..

Prof. Shivappa
ಪ್ರೊ.ಆರ್.ಶಿವಪ್ಪ

By

Published : Jan 18, 2021, 3:24 PM IST

ಮೈಸೂರು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನಕ ಜಯಂತಿ ಕಾರ್ಯಕ್ರಮಕ್ಕೆ ನಾನು ಕುಲಸಚಿವನಾಗಿ ಹೋಗಿರಲಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಭಾಗವಹಿಸಿದ್ದೆ.

ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್.ಶಿವಪ್ಪ

ಭಾರತೀಯ ಸಂಪ್ರದಾಯದಂತೆ ಹಿರಿಯರ ಕಾಲಿಗೆ ನಮಸ್ಕರಿಸುತ್ತೀವಿ. ಅದರಂತೆ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ್ದೀನಿ. ಇದನ್ನು ಅನ್ಯತಾ ಭಾವಿಸಬೇಡಿ ಎಂದು ಸೋಷಿಯಲ್ ಮೀಡಿಯಾ ಟ್ರೋಲರ್​ಗಳಿಗೆ ಮನವಿ ಮಾಡಿದರು.

ನಾನು ಒಬ್ಬ ಅಧಿಕಾರಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗದೇ, ಸಾಮಾನ್ಯನಂತೆ ಹೋಗಿದ್ದೆ. ಹಿರಿಯರಿಗೆ ಗೌರವ ಕೊಟ್ಟಿದ್ದೀನಿ ಅಷ್ಟೇ.. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದರು.

ABOUT THE AUTHOR

...view details