ಕರ್ನಾಟಕ

karnataka

ETV Bharat / state

ಸಂಸತ್​ನಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರತಾಪ್​ ಸಿಂಹ: ಸಿದ್ದರಾಮಯ್ಯಗೆ ​ಅಭಿನಂದನೆ ಸಲ್ಲಿಸಿದ್ದೇಕೆ? - The Siddi community

ತಳವಾರ,ಪರಿವಾರ ಮತ್ತು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನ( ಪರಿಶಿಷ್ಟ ಪಂಗಡ) ಆದೇಶ(2ನೇ ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರಕಿದೆ.

parliament-session
parliament-session

By

Published : Feb 12, 2020, 3:54 AM IST

Updated : Feb 12, 2020, 4:56 AM IST

ಮೈಸೂರು: ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನ( ಪರಿಶಿಷ್ಟ ಪಂಗಡ) ಆದೇಶ(2ನೇ ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರಕಿದೆ.

2019ರ ಡಿಸೆಂಬರ್ 16ರಂದು ನಡೆದಿದ್ದ ಚಳಿಗಾಲದ ಅಧಿವೇಶದಲ್ಲಿ ತಿದ್ದುಪಡಿಗೆ ರಾಜ್ಯಸಭೆಯಿಂದ ಅಂಗೀಕಾರ ದೊರೆಕಿತ್ತು. ಬಜೆಟ್ ಅಧಿವೇಶನದ ಮೊದಲ ಹಂತದ ಕೊನೆಯ ದಿನ ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಮಸೂದೆ ಮಂಡಿಸಿದರು. ವಿಪಕ್ಷಗಳ ಸದಸ್ಯರೂ ಕೂಡ ಮಸೂದೆಯನ್ನು ಸ್ವಾಗತಿಸಿದರು. ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅನುಮೋದನೆ ಬಾಕಿ ಇದೆ.

ಸಂಸತ್​ನಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರತಾಪ್​ ಸಿಂಹ

ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ವಾಸಿಸುತ್ತಿರುವ ತಳವಾರ, ಪರಿವಾರ ಸಮುದಾಯ ಹಾಗೂ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಿದ್ದಿ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳು ದೊರೆಯಲು ಈ ಮಸೂದೆ ನೆರವಾಗಲಿದೆ.

ಸಂಸತ್‌ನಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ಕನ್ನಡದಲ್ಲಿಯೇ ಮಾತನಾಡಿ, ಪರಿವಾರ ಹಾಗೂ ತಳವಾರ ಸಮುದಾಯವು ನಾಯಕ ಸಮುದಾಯದ ಪರ್ಯಾಯ ಪದ, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈ ಸಮುದಾಯದ ಜನರು 36 ವರ್ಷಗಳ ಹಿಂದೆ ಸಲ್ಲಿಸಿದ್ದ ಬೇಡಿಕೆಯ ಈಡೇರಿಕೆ ದಿನ ಬಂದಿದೆ. ಇದರ ಬಗ್ಗೆ ಅನೇಕರು ಹೋರಾಟ ಮಾಡಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯ ಸಚಿವ ಸಂಪುಟದ ಒಪ್ಪಿಗೆ ನೀಡಿ ಸಂಸತ್‌ಗೆ ಕಳುಹಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದರೆಲ್ಲರೂ ಅಭಿನಂದನೆಗೆ ಅರ್ಹರು ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

Last Updated : Feb 12, 2020, 4:56 AM IST

ABOUT THE AUTHOR

...view details