ಕರ್ನಾಟಕ

karnataka

ETV Bharat / state

ಯುವದಸರಾ ಆರಂಭ: ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣು - ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣು

ವಿಶ್ವವಿಖ್ಯಾತ ದಸರಾ ವೇಳೆ ನಡೆಯುವ ಯುವ ದಸರಾದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಯುವದಸರಾದಲ್ಲಿ ಖಾಕಿ ಹದ್ದಿನ ಕಣ್ಣು..!

By

Published : Oct 1, 2019, 11:07 PM IST

ಮೈಸೂರು:ವಿಶ್ವವಿಖ್ಯಾತ ದಸರಾಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಈ ಹಿನ್ನೆಲೆ ಯಾವುದೇ ಕಳ್ಳತನ ಅಥವಾ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಯುವದಸರಾದಲ್ಲಿ ಖಾಕಿ ಹದ್ದಿನ ಕಣ್ಣು..!

ಮಹಾರಾಜ ಕಾಲೇಜು ಮೈದಾನದಲ್ಲಿ ಇಂದಿನಿಂದ ಆರು ದಿನಗಳ ಕಾಲ ನಡೆಯುವ ಯುವದಸರಾ ಆರಂಭವಾಗಿದ್ದು,ಈ ಹಿನ್ನೆಲೆಯಲ್ಲಿ ಯುವ ದಸರಾ ಸಮಿತಿ ಉಪವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್ ಹಾಗೂ ಡಿಸಿಪಿ ಎಂ.ಮುತ್ತುರಾಜ್ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದಾರೆ.

ಯುವದಸರಾ ಕಾರ್ಯಕ್ರಮ ಆರಂಭವಾದಾಗ ಯಾವ ರೀತಿ ಯುವ ಜನಾಂಗದೊಂದಿಗೆ ವರ್ತಿಸಿಬೇಕು, ಅವರನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ನಿರ್ದೇಶನಗಳನ್ನು ನೀಡಿದ್ದಾರೆ. ಯುವ ದಸರಾದಲ್ಲಿ15 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, 32 ಸಿಸಿಟಿವಿಗಳನ್ನು ಭದ್ರತೆಗೆ ಅಳವಡಿಸಲಾಗಿದೆ.

ABOUT THE AUTHOR

...view details