ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್ ಆದೇಶ ತಪ್ಪಾಗಿ ಅರ್ಥೈಸಿಕೊಂಡು ಅಧಿಕಾರಿಗಳು ದೇವಸ್ಥಾನ ಕೆಡವಿದ್ದಾರೆ: ಪೇಜಾವರ ಶ್ರೀ - ಶ್ರೀನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪೇಜಾವರ ಶ್ರೀ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿ ಜಿಲ್ಲಾಡಳಿತ ಮಹದೇವಮ್ಮ ದೇವಸ್ಥಾನವನ್ನು ತೆರವು ಮಾಡಿದ ವಿಚಾರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

Pejavara matt vishwaprasanna swamij
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

By

Published : Sep 26, 2021, 8:58 PM IST

ಮೈಸೂರು:ನಂಜನಗೂಡು ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನವನ್ನು ಅಧಿಕಾರಿಗಳು ದುಡುಕಿನಿಂದ ಕೆಡವಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಂಜನಗೂಡು ತಾಲೂಕಿನ ಶ್ರೀನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸುಪ್ರೀಂಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅಧಿಕಾರಿಗಳು ದೇವಸ್ಥಾನವನ್ನು ತೆರವು ಮಾಡಿಸಿದ್ದಾರೆ. ದೇಗುಲದ ತೆರವಿನಿಂದ ಹಿಂದೂ ಸಮಾಜಕ್ಕೆ ಆಘಾತವಾಗಿದೆ. ದೇವಸ್ಥಾನದಲ್ಲಿ ತೆರವುಗೊಳಿಸಿದ ಸ್ಥಳದಲ್ಲಿ ಶಾಸನಗಳು ಸಿಕ್ಕಿವೆ. ಅವುಗಳನ್ನು ರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ ಎಂದರು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ದೇವಸ್ಥಾನವೊಂದರಲ್ಲಿ ದಲಿತರು ಪ್ರವೇಶ ನೀಡಿದ್ದಕ್ಕೆ ದಂಡ ಹಾಕಲಾಗಿದೆ ಎಂಬ ವಿಚಾರವನ್ನು ಮಾಧ್ಯಮಗಳಲ್ಲಿ ನೋಡಿದೆ. ಇದು ನಿಜವಾಗಿದ್ದರೆ ಅಕ್ಷಮ್ಯ ಅಪರಾಧ. ದೇವಾಲಯಕ್ಕೆ ಬರಲು ಎಲ್ಲರಿಗೂ ಅವಕಾಶ ಕೊಡಬೇಕು. ಇದರ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಗ್ರಾಮಸ್ಥರ ಮನವೊಲಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ:COVID: ರಾಜ್ಯದಲ್ಲಿಂದು 775 ಮಂದಿಗೆ ಕೋವಿಡ್, 9 ಸೋಂಕಿತರ ಸಾವು

ABOUT THE AUTHOR

...view details