ಮೈಸೂರು: ದಕ್ಷಿಣ ಭಾರತ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ನೂರಕ್ಕೆ ನೂರರಷ್ಟು ಸಂಬಳ ಕೊಟ್ಟಿರುವುದು ಅಂದರೆ ಅದು ನಮ್ಮ ರಾಜ್ಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಎಸ್. ಸವದಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಮೊದಲ ಅಲೆ ಬಂದಾಗ ಸಾರಿಗೆ ಸಂಸ್ಥೆಗೆ ಬಹಳ ಹೊಡೆತ ಬಿದ್ದಿತ್ತು. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2,480 ಕೋಟಿ ರೂ. ನೀಡಿ, ಸಾರಿಗೆಯಲ್ಲಿರುವ 1.25 ಲಕ್ಷ ಸಿಬ್ಬಂದಿಗೆ ಅನುಕೂಲ ಮಾಡಿಕೊಟ್ಟರು ಎಂದರು.
ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರಿಗೆ ಸಂಬಳ ಕಡಿತಗೊಳಿಸಿಲ್ಲ. 2004ರಿಂದ 'ನನ್ನ ಬೆಳೆ ನನ್ನ ಹಕ್ಕು' ಎಂಬ ಕಾಯಿದೆಯನ್ನು ರಾಜ್ಯ ಸರ್ಕಾರ ಮಾಡಿದೆ. ಇದೇ ಕಾಯ್ದೆಯಂತೆ ಎಪಿಎಂಸಿ ತಿದ್ದುಪಡಿ ಮಾಡಲಾಗಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಿದೆ. ಇದರಿಂದ ರೈತರಿಗೆ ಸೆಸ್ ಹೊರೆ ಇಳಿದಿದೆ. ಆದರೆ, ವಿರೋಧ ಪಕ್ಷದವರು ಚುನಾವಣಾ ಪ್ರಚಾರಕ್ಕಾಗಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಜನರಲ್ಲಿ ಹಾಗೂ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಮೈಸೂರು ಪೇಟಾ ತೊಡಿಸಿ ನೂತನ ರಾಜ್ಯಪಾಲರಿಗೆ ಬಿಜೆಪಿ ಸ್ವಾಗತ