ಕರ್ನಾಟಕ

karnataka

ETV Bharat / state

ಕೆ.ಆರ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ

ಮೈಸೂರಿನ ಕೆ.ಆರ್ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ ಹಿನ್ನೆಲೆ ಪಾರ್ಸೆಲ್​ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Only parcel is available at Indira Canteen in KR Hospital premises
ಕೆ.ಆರ್ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ

By

Published : May 12, 2021, 10:00 PM IST

ಮೈಸೂರು: ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್​ನಲ್ಲಿ ದಿನದ 3 ಹೊತ್ತು ಉಚಿತ ಆಹಾರ ನೀಡಲಾಗುತ್ತಿದ್ದು, ಪಾರ್ಸೆಲ್​ಗೆ ಮಾತ್ರ ವ್ಯವಸ್ಥೆ ಇದೆ.

ಮೈಸೂರು ನಗರದ ಕೆ.ಆರ್ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಿಜವಾಗಿಯೂ ಹಸಿದವರ ಪಾಲಿಗೆ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ. ಆಸ್ಪತ್ರೆಗೆ ಬರುವ ಬಡ ರೋಗಿಗಳ ಜೊತೆ ಬರುವ ಜನರು ಆಸ್ಪತ್ರೆ ಒಳಗೆ ಹೋಗುವ ಹಾಗಿಲ್ಲ. ಇದೇ ಆವರಣದಲ್ಲಿರುವ ಜನರಿಗೆ ಹೊಟ್ಟೆ ತುಂಬಿಸುವ ಕೆಲಸದ ಜೊತೆಗೆ ಆಸ್ಪತ್ರೆ ಬಳಿಯ ಕೂಲಿ‌ ಕೆಲಸಗಾರರು, ಭಿಕ್ಷುಕರಿಗೆ ಈ ಇಂದಿರಾ ಕ್ಯಾಂಟೀನ್ ಆಧಾರವಾಗಿದೆ.

ಕೆ.ಆರ್ ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್​ನಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ

ಓದಿ:18-44 ವಯೋಮಾನದವರಿಗೆ ಕೋವಿಡ್​ ಲಸಿಕೆ ಹಂಚಿಕೆ ಮುಂದೂಡಲು ಸರ್ಕಾರದ ಚಿಂತನೆ

ಪಾರ್ಸೆಲ್​ ಕೊಡುತ್ತಿರುವ ಬಗ್ಗೆ ಮಾತನಾಡಿರುವ ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಸಂತೋಷ್​, ನಿತ್ಯ ಆಸ್ಪತ್ರೆಗೆ ನೂರಾರು ಸಂಖ್ಯೆಯ ರೋಗಿಗಳು ಸಂಬಂಧಿಕರು ಬರುತ್ತಾರೆ. ಕೆ.ಆರ್. ಆಸ್ಪತ್ರೆ ಒಳಗೆ ಇಂದಿರಾ ಕ್ಯಾಂಟೀನ್‌ ಇರುವ ಕಾರಣ ಕೋವಿಡ್ ಹಾಗೂ ಸ್ವಚ್ಚತೆ ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ABOUT THE AUTHOR

...view details