ಕರ್ನಾಟಕ

karnataka

ETV Bharat / state

ಅ.​16 ಕ್ಕೆ ನಟಿ ಮಿಲನ ನಾಗರಾಜ್​ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ - ಮಾಲ್​ ಆಫ್​ ಮೈಸೂರ್​ನ ಐನಾಕ್ಸ್​​ನಲ್ಲಿ ಚಲನಚಿತ್ರೋತ್ಸವ

ಅಕ್ಟೋಬರ್​ 16 ರಂದು ಬೆಳಗ್ಗೆ 9:30ಕ್ಕೆ ನಗರದ ಮಾಲ್​ ಆಫ್​ ಮೈಸೂರ್​ನ ಐನಾಕ್ಸ್​​ನಲ್ಲಿ ಚಲನಚಿತ್ರೋತ್ಸವ ಆರಂಭಗೊಳ್ಳಲಿದ್ದು ನಟಿ ಮಿಲನ ನಾಗರಾಜ್ ಉದ್ಘಾಟಿಸಲಿದ್ದಾರೆ.

ಮಿಲನ ನಾಗರಾಜ್​ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ
ಮಿಲನ ನಾಗರಾಜ್​ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ

By ETV Bharat Karnataka Team

Published : Oct 14, 2023, 11:21 AM IST

ಮೈಸೂರು:ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿಯಿಂದ ಅಕ್ಟೋಬರ್​ 16 ರಂದು ಬೆಳಗ್ಗೆ 9:30ಕ್ಕೆ ನಗರದ ಮಾಲ್​ ಆಫ್​ ಮೈಸೂರ್​ನ ಐನಾಕ್ಸ್​​ನಲ್ಲಿ ಚಲನಚಿತ್ರೋತ್ಸವನ್ನು ಚಂದನವನದ ನಟಿ ಮಿಲನ ನಾಗರಾಜ್ ಉದ್ಘಾಟಿಸಲಿದ್ದಾರೆ.

ಚಲನಚಿತ್ರೋತ್ಸವದ ಪ್ರಯುಕ್ತ ಸೆಲ್ಫಿ ಸ್ಟಿಕ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಗರದ ಮಾಲ್ ಆಫ್ ಮೈಸೂರ್​ನ ಐನಾಕ್ಸ್ ಹಾಗೂ ಬಿ.ಎಮ್.ಹೆಚ್ ನ ಡಿ.ಆರ್.ಸಿ ಯಲ್ಲಿರುವ ಸೆಲ್ಫಿ ಸ್ಟ್ಯಾಂಡ್​ಗಳಲ್ಲಿ ಸೆಲ್ಫಿ ತೆಗೆದು @MYDFF2023 ಪೇಜ್​ಗೆ ಟ್ಯಾಗ್ ಮಾಡುವ ಮೂಲಕ ಸೆಲ್ಫಿಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಉತ್ತಮವಾದ ಮೂರು ಸೆಲ್ಫಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಇಂದು ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿಗಳಾದ ಎಮ್ ಕೆ ಸವಿತಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾ ಪ್ರಾಯೋಜಿತರಿಗೆ ಡಿಸಿಯಿಂದ ಧನ್ಯವಾದ:ದಸರಾ ಹಿನ್ನೆಲೆಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರುದಸರಾ ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆಯ ಕಡೆಗೂ ಗಮನವಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಅರಮನೆ ಮಂಡಳಿ ಕಚೇರಿಯಲ್ಲಿ ಇಂದು ನಡೆದ ದಸರಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು. ಎಲ್ಲಿಯೂ ವಿದ್ಯುತ್ ಅವಘಡಗಳಾಗದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದರು.

ಮುಂದುವರೆದು, ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತಿದ್ದು, ಕೆಲಸ ಚುರುಕುಗೊಳ್ಳಬೇಕು. ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು ಮುಖ್ಯ. ರಸ್ತೆ ಚರಂಡಿಗಳನ್ನು ಕೂಡಲೆ ದುರಸ್ತಿ ಪಡಿಸಿ, ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರುಗಳ ಸುರಕ್ಷತೆಗೂ ಹೆಚ್ಚಿನ ಗಮನಹರಿಸಬೇಕು ಎಂದರು.

ದಸರಾ ದೀಪಾಲಂಕಾರ ಆಕರ್ಷಕವಾಗಿರುವುದರೊಂದಿಗೆ ರಸ್ತೆಗಳ ಸೌಂದರೀಕರಣಕ್ಕೂ ಒತ್ತು ನೀಡಿ, ಕುಸ್ತಿಪಟುಗಳಿಗೆ ಉತ್ತಮ ಗೌರವ ಧನ ನೀಡಿ. ಚಲನ ಚಿತ್ರೋತ್ಸವವನ್ನು ಹೆಚ್ಚು ಜನ ವೀಕ್ಷಿಸುವಂತೆ ಆಯೋಜನೆ ಮಾಡಿ. ಆಹಾರ ಮೇಳದಲ್ಲಿ ಎಲ್ಲಾ ಭಾಗಗಳ ಆಹಾರ ಮಳಿಗೆಗಳು ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ, ದಸರಾ ಉತ್ಸವಕ್ಕೆ 1 ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರಾಗಲು ಒಪ್ಪಿರುವ ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ ಹಾಗೂ ಸಿಲ್ವರ್ ಪ್ರಾಯೋಜಕತ್ವ ನೀಡಿಲಿರುವ ಎಸ್.ಬಿ.ಐ.ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ಹೇಳಲಾಯಿತು.

ಸಭೆಯಲ್ಲಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಮೈಸೂರು ದಸರಾ ಹಾಗೂ ವಿಜಯದಶಮಿ ರಜೆ: ಕೆಎಸ್​ಆರ್​ಟಿಸಿಯಿಂದ 2000 ಕ್ಕೂ ಹೆಚ್ಚು ವಿಶೇಷ ಸಾರಿಗೆ ವ್ಯವಸ್ಥೆ

ABOUT THE AUTHOR

...view details