ಮೈಸೂರು:ಮೈಸೂರುನಗರದ 7 ವರ್ಷದ ಬಾಲಕ ಜಿ.ವಿ.ರಿಜ್ಜುಲ್ಪಜ಼ಲ್ಗಳಲ್ಲಿ ಮಾಡೆಲ್ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮೆಚ್ಚುಗೆಗೆ ಪಾತ್ರನಾಗಿದ್ದು, ಆತನೊಂದಿಗೆ ಈಟಿವಿ ಭಾರತ್ ವಿಶೇಷ ಸಂದರ್ಶನ ನಡೆಸಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗೌರವ ಪಡೆದ ಮೈಸೂರಿನ ಬಾಲಕ - ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಗೌರವ ಪಡೆದ ಜಿ.ವಿ.ರಿಜ್ಜುಲ್
7 ವರ್ಷದ ಬಾಲಕ ಜಿ.ವಿ.ರಿಜ್ಜುಲ್, ಪಜ಼ಲ್ಗಳಲ್ಲಿ ಸುಮಾರು 20 ನಿಮಿಷಗಳಲ್ಲಿ 400ಕ್ಕೂ ಅಧಿಕ ಬ್ಲಾಕ್ ಗಳನ್ನು ಜೋಡಿಸಿ ರೊಬೋ, ವಿಮಾನ, ಹೆಲಿಕಾಪ್ಟರ್, ಕಾರ್ ಮಾಡೆಲ್ ಗಳನ್ನು ಮಾಡಿದ್ದು, ಚಿಕ್ಕ ವಯಸ್ಸಿನಲ್ಲೇ ಇತನ ಪ್ರತಿಭೆಯನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮೆಚ್ಚುಗೆಯ ಪತ್ರ ನೀಡಿದೆ.
7 ವರ್ಷದ ಬಾಲಕ ಜಿ.ವಿ.ರಿಜ್ಜುಲ್, ಈತ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದು , ಈತ ಪಜ಼ಲ್ಗಳಲ್ಲಿ ಸುಮಾರು 20 ನಿಮಿಷಗಳಲ್ಲಿ 400ಕ್ಕೂ ಅಧಿಕ ಬ್ಲಾಕ್ ಗಳನ್ನು ಜೋಡಿಸಿ ರೊಬೋ, ವಿಮಾನ, ಹೆಲಿಕಾಪ್ಟರ್, ಕಾರ್ ಮಾಡೆಲ್ ಗಳನ್ನು ಮಾಡಿದ್ದು, ಚಿಕ್ಕ ವಯಸ್ಸಿನಲ್ಲೇ ಇತನ ಪ್ರತಿಭೆಯನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮೆಚ್ಚುಗೆಯ ಪತ್ರ ನೀಡಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಬಾಲಕ ರಿಜ್ಜುಲ್ ನಾನು ಪಜ಼ಲ್ನಲ್ಲಿ ರೊಬೋಟ್, ಕಾರ್, ರಾಕೆಟ್, ಹೆಲಿಕಾಪ್ಟರ್ ಜೋಡಿಸುತ್ತೇನೆ ಎನ್ನುತ್ತಾನೆ. ಇನ್ನು ಮಗನ ಈ ಸಾಧನೆ ಬಗ್ಗೆ ತಾಯಿ ಸಪ್ನ ಮಾತನಾಡಿ ಕಡಿಮೆ ಅವಧಿಯಲ್ಲಿ ಬ್ಲಾಕ್ ಗಳನ್ನು ಜೋಡಿಸುತ್ತಾನೆ, ಅವನಿಗೆ ಏನೇ ಸಿಕ್ಕಿದ್ದರು ಅದನ್ನು ಜೋಡಿಸುತ್ತಾನೆ. 400 ಪೀಸ್ ಗಳು ಇದ್ದ ಪಜ಼ಲ್ ನನ್ನು 20 ನಿಮಿಷದಲ್ಲಿ ವಿಮಾನ, ರಾಕೆಟ್, ರೊಬೋಟ್ ಗಳನ್ನು ಮಾಡಿದ್ದಾನೆ. ಇದನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳುಹಿಸಿದ್ದೆವು ಅಲ್ಲಿಂದ ಇವನ ಸಾಧನೆಯನ್ನು ನೋಡಿ ಸರ್ಟಿಫಿಕೇಟ್, ಮೆಡಲ್ ನೀಡಿ ಗೌರವಿಸಿದ್ದಾರೆ. ಇದು ಸಂತೋಷ ತಂದಿದೆ ಎನ್ನುತ್ತಾರೆ.