ಕರ್ನಾಟಕ

karnataka

ETV Bharat / state

ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ: ಚೋಟಾ ಪಾಕಿಸ್ತಾನ್​​ ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ - ಕವಲಂದೆ ಚೋಟಾ ಪಾಕಿಸ್ತಾನ್​​ ಆಡಿಯೋ ಪ್ರಕರಣ

ಚೋಟಾ ಪಾಕಿಸ್ತಾನ್​​ ಎಂಬ ಆಡಿಯೋ ವೈರಲ್​ ಪ್ರಕರಣ ಸಂಬಂಧ ಆರೋಪಿಗಳ ಕೃತ್ಯಕ್ಕೆ ಮುಸ್ಲಿಂ ಮುಖಂಡರಿಂದ ಖಂಡನೆ ವ್ಯಕ್ತವಾಗಿದೆ.

muslim-leaders-reaction-on-chota-pakistan-audio-case
ಚೋಟಾ ಪಾಕಿಸ್ತಾನ್​​ ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ

By

Published : May 6, 2022, 9:14 PM IST

Updated : May 6, 2022, 10:56 PM IST

ಮೈಸೂರು: ಕವಲಂದೆಯನ್ನು ಚೋಟಾ ಪಾಕಿಸ್ತಾನ್​​ ಎಂಬ ಆಡಿಯೋ ವೈರಲ್​ ಪ್ರಕರಣ ಸಂಬಂಧ ಆರೋಪಿಗಳ ಕೃತ್ಯವನ್ನು ಸ್ಥಳೀಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ. ಭಾರತ ನಮ್ಮ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಬದುಕುತ್ತೇವೆ. ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಘಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಸ್ಲಿಂ ಮುಖಂಡರು, ಇದು ನಾವು ಹುಟ್ಟಿ ಬೆಳೆದ ದೇಶ, 8-10 ತಲೆಮಾರುಗಳಿಂದ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಭಾರತ ಒಂದು ಸುಂದರವಾದ ಬೊಂಬೆಯಂತೆ. ಘಟನೆ ಹಿಂದೆ ಯಾರ ಕುಮ್ಮಕ್ಕೂ ಇಲ್ಲ, ನಮ್ಮ ಬೆಂಬಲವೂ ಇಲ್ಲ. ಪಾಕಿಸ್ತಾನದ ಹೆಸರನ್ನು ನಾವು ಯಾವುದೇ ಕಾರಣಕ್ಕೂ ಬಳಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಚೋಟಾ ಪಾಕಿಸ್ತಾನ್​​ ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ

ಈ ವಿಚಾರ ನಮಗೆ ಗೊತ್ತಿಲ್ಲ, ಗೊತ್ತಾಗಿದ್ದರೆ ಅಲ್ಲೇ ಆರೋಪಿಗಳಿಗೆ ಬಾರಿಸುತ್ತಿದ್ದೆವು. ನಮಗೂ ಮಾಧ್ಯಮಗಳಲ್ಲಿ ನೋಡಿ ಈ ಬಗ್ಗೆ ತಿಳಿಯಿತು. ಯುವಕರು ಮಾಡಿರುವುದು ಅಕ್ಷಮ್ಯ ಅಪರಾಧ, ನಮಗೆ ಬೇರೆ ದೇಶದ ಬಗ್ಗೆ ಚಿಂತೆ ಯಾಕೆ? ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ಕವಲಂದೆಯನ್ನು ಛೋಟಾ ಪಾಕಿಸ್ತಾನ್​ ಎಂದಿದ್ದ ಆಡಿಯೋ, ವಿಡಿಯೋ ವೈರಲ್​ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಗಿದ್ದು, ವಿಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.

ಪ್ರಕರಣದ ಹಿನ್ನೆಲೆ: 'ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್ ಠೀಕ್ ಹೈ' ಎಂಬ ಧ್ವನಿ ಹೊಂದಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರು ಎಸ್​ಪಿ ಜೊತೆ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ನಂಜನಗೂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಲಾಗಿದ್ದು, ವಿಡಿಯೋದಲ್ಲಿರುವುದು ತಮ್ಮದೇ ಧ್ವನಿ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.

ಇದನ್ನೂ ಓದಿ:ಚೋಟಾ ಪಾಕಿಸ್ತಾನ್​ ಆಡಿಯೋ ವೈರಲ್ ಪ್ರಕರಣ​.. ಇಬ್ಬರು ಆರೋಪಿಗಳ ಬಂಧನ

Last Updated : May 6, 2022, 10:56 PM IST

For All Latest Updates

ABOUT THE AUTHOR

...view details