ಮೈಸೂರು:ಬರ್ತ್ ಡೇ ಪಾರ್ಟಿಯಲ್ಲಿ ಬಿಜೆಪಿ ಮುಂಖಡ ಭೀಕರವಾಗಿ ಕೊಲೆಯಾಗಿರುವ ಘಟನೆ ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ಬರ್ತ್ ಡೇ ಪಾರ್ಟಿಯಲ್ಲಿ ಬಿಜೆಪಿ ಮುಖಂಡನ ಕೊಲೆ
ಬರ್ತ್ ಡೇ ಪಾರ್ಟಿ ಮಾಡುವ ವೇಳೆ ಬಿಜೆಪಿ ಮುಖಂಡ ಎಸ್. ಆನಂದ್ನನ್ನು ಆತನ ಸ್ನೇಹಿತರೇ ಬಿಯರ್ ಬಾಟಲಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಕುವೆಂಪು ನಗರದ ಲವಕುಶ ಪಾರ್ಕ್ ಬಳಿ ಇರುವ ಸರ್ವಿಸ್ ಅಪಾರ್ಟ್ ಮೆಂಟ್ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಆನಂದ್ ಹಾಗೂ ಆತನ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿ ಆತನ ಸ್ನೇಹಿತರು ಆನಂದ್ ಹೊಟ್ಟೆಗೆ ಬಿಯರ್ ಬಾಟಲಿನಿಂದ ಮನಸೋ ಇಚ್ಚೆ ಚುಚ್ಚಿ ಕೊಲೆ ಮಾಡಲಾಗಿದ್ದು, ಸ್ಥಳಕ್ಕೆ ನಗರ ಪೋಲಿಸ್ ಕಮಿಷನರ್ ಸೇರಿದಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಧಾವಿಸಿದ್ದಾರೆ.
ಈ ಘಟನೆ ಬಗ್ಗೆ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಕೊಲೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಬರ್ತ್ ಡೇ ಪಾರ್ಟಿ ಮಾಡುವ ವೇಳೆ ಕೊಲೆ ನಡೆದಿದೆ. ಆರೋಪಿಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದರು. ಕೊಲೆಯಾದ ವ್ಯಕ್ತಿಯೂ ರೌಡಿಶೀಟರ್ ಎನ್ನಲಾಗಿದ್ದು, ಈತ ನಗರ ಬಿಜೆಪಿ ಸ್ಲಂ ಮೋರ್ಚದ ಅಧ್ಯಕ್ಷ ಎನ್ನಲಾಗಿದೆ.