ಮೈಸೂರು:ಮೇಕೆ ಕಳ್ಳತನ ಮಾಡಿ ತಪ್ಪಿಸಿಕೊಂಡು ಹೋಗುವಾಗ ಸಿಕ್ಕಿಬಿದ್ದ ಆರೋಪಿ ಸಾಯುವಂತೆ ಥಳಿಸಿದ ಮೂವರನ್ನು ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮೇಕೆ ಕಳ್ಳನ ಕೊಲೆ ಪ್ರಕರಣ... ಮೂವರು ಆರೋಪಿಗಳು ಅರೆಸ್ಟ್ - mysore latest crime news
ಮೇಕೆ ಕದೊಯ್ಯುತ್ತಿದ್ದಾಗ ಸಿಕ್ಕಿಬಿದ್ದ ಕಳ್ಳನಿಗೆ ಸಾಯುವಂತೆ ಹಲ್ಲೆ ಮಾಡಿದ ಮೂವರು ಆರೋಪಿಗಳನ್ನು ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಅರೆಸ್ಟ್
ಬೆಲವತ್ತ ಗ್ರಾಮದ ಮಹೇಶ, ರವಿ, ಭರತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಹೀರ್ ಎಂಬಾತ ಭಾನುವಾರ ಗೆಳೆಯನೊಂದಿಗೆ ಮೇಕೆ ಕಳವು ಮಾಡಲು ಹೋಗಿ ಗ್ರಾಮಸ್ಥರಿಂದ ತಪ್ಪಿಸಿಕೊಂಡು ಆಟೋದಲ್ಲಿ ಹೋಗುವಾಗ ಆಟೋ ಪಲ್ಟಿಯಾಗಿತ್ತು. ಈ ವೇಳೆ ಸಿಕ್ಕಿಬಿದ್ದ ಆತನ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ ಪರಿಣಾಮ ತೀವ್ರವಾಗಿ ಗಾಯಕೊಂಡಿದ್ದ ಜಹೀರ್ ಸಾವನ್ನಪ್ಪಿದ್ದ. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.