ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆಯಲ್ಲಿ ಕೊಚ್ಚಿ ಹೋದ್ರು, ಈಗೇನು ಮಾಡ್ತಾರೆ ನೋಡೋಣ: ಸಂಸದ ಶ್ರೀನಿವಾಸ್ ಪ್ರಸಾದ್ - MP Srinivas Prasad

ರಾಜ್ಯದಲ್ಲಿ ನೆರೆ ಹಾವಳಿ ಇರುವುದರಿಂದ ಸರಳವಾಗಿ ದಸರಾ ಮಾಡಿ ಎಂದು ಹೇಳಿದೆ. ರದ್ದು ಮಾಡಿ ಅಂತಾ ನಾನು ಹೇಳಿಕೆ ನೀಡಿಲ್ಲವೆಂದ ಸಂಸದ ಶ್ರೀನಿವಾಸ್ ಪ್ರಸಾದ್.

ಲೋಕಚುನಾವಣೆಯಲ್ಲಿ ಕೊಚ್ಚಿ ಹೋದ್ರು, ಈಗೇನು ಮಾಡ್ತಾರೆ ನೋಡೋಣ: ಸಂಸದ ಶ್ರೀನಿವಾಸ್ ಪ್ರಸಾದ್

By

Published : Sep 25, 2019, 3:56 AM IST

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕೊಚ್ಚಿ ಹೋಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಮೈತ್ರಿ ಬಿಟ್ಟು ನಿಂತಿದ್ದಾರೆ. ಈಗ ಏನು ಮಾಡ್ತಾರೆ ನೋಡೋಣವೆಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕುಟುಕಿದರು.

ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಫರ್ಧೆ ಎದುರಾಗಲಿದೆ. ಆದರೆ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

14 ತಿಂಗಳು ಮೈತ್ರಿ ಸರ್ಕಾರದಿಂದ‌ ಹೊರಬಂದ ನಂತರ ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಿತ್ತಾಡುತ್ತಿದ್ದಾರೆ. ಯಾರು ಯಾರಿಗೆ ಹದ್ದು ಎಂಬುವುದನ್ನು ಅವರೇ ನಿರ್ಧಾರ ಮಾಡ್ತಾರೆ ಎಂದು ವ್ಯಂಗ್ಯವಾಡಿದರು.

ಸುಪ್ರೀಂಕೋರ್ಟ್​ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ‌. ಅವರ ಪ್ರಬಲ ಮುಖಂಡರು ಸ್ಪರ್ಧೆ ಮಾಡಿ ಗೆದ್ದು ಬರ್ತಾರೆ ಎಂದರು.

ABOUT THE AUTHOR

...view details