ಕರ್ನಾಟಕ

karnataka

ETV Bharat / state

ಗಂಡನ ಅಕಾಲಿಕ ಸಾವು: ಸೆಲ್ಫಿ ವಿಡಿಯೋ ಮಾಡಿ ತಾಯಿ ಜೊತೆ ಹೆಂಡತಿ ಆತ್ಮಹತ್ಯೆ - kannadanews

ಗಂಡನ ಅಕಾಲಿಕ ಸಾವಿನಿಂದ ಆಘಾತಗೊಂಡು ತನ್ನ ತಾಯಿ ಜೊತೆ ಮೃತನ ಹೆಂಡತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿ ತಾಯಿ ಮಗಳು ಆತ್ಮಹತ್ಯೆ

By

Published : Aug 25, 2019, 11:13 PM IST

ಮೈಸೂರು:ಗಂಡನ ಅಕಾಲಿಕ ಸಾವಿನಿಂದ ಆಘಾತಕ್ಕೆ ಒಳಗಾದ ಮೃತನ ಹೆಂಡತಿ ತನ್ನ ತಾಯಿ ಜೊತೆ ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಸಂಗಮದಲ್ಲಿ ನಡೆದಿದೆ.


ಮೈಸೂರು ನಗರದ ಮಂಚೇಗೌಡನ ಕೊಪ್ಪಲಿನ ನಿವಾಸಿಗಳಾದ ಮಂಜುಳ (38), ಸೌಮ್ಯ ಅಲಿಯಾಸ್ ಕಾವ್ಯಶ್ರೀ (19) ಆತ್ಮಹತ್ಯೆಗೆ ಶರಣಾದವರು. ವಾರದ ಹಿಂದೆಯಷ್ಟೇ ಕಾವ್ಯಶ್ರೀ ಗಂಡ ಅಕಾಲಿಕ ಸಾವಿಗೆ ಒಳಗಾಗಿದ್ದರು. ಇದರಿಂದ ತೀವ್ರವಾಗಿ ಜರ್ಜರಿತವಾಗಿದ್ದ ಹೆಂಡತಿ ಹಾಗೂ ಆಕೆಯ ತಾಯಿ ಮಂಜುಳ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದರು. ನಂಜನಗೂಡು ಬಳಿಯ ಕಪಿಲಾ ನದಿಯ ಸಂಗಮದ ಗದ್ದುಗೆಯ ಸ್ನಾನಘಟ್ಟದ ಬಳಿ ಇಬ್ಬರು ಸೆಲ್ಫಿ ವಿಡಿಯೋ ತೆಗೆದುಕೊಂಡು ಮೊಬೈಲ್ ಹಾಗೂ ಚಪ್ಪಲಿಯನ್ನು ಅಲ್ಲೇ ಬಿಟ್ಟು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ದೇಹಗಳು ಇಂದು ಪತ್ತೆ ಆಗಿವೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಮೃತದೇಹಗಳನ್ನು ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ABOUT THE AUTHOR

...view details