ಮೈಸೂರು: ಕಾಂಗ್ರೆಸ್ ನಾಯಕರು ಅವರ ಶಾಸಕರಿಗೆ ರಕ್ಷಣೆ ನೀಡದವರು ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ. ಡಿ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎ. ರಾಮದಾಸ್ ಒತ್ತಾಯಿಸಿದರು.
ಒಬ್ಬ ಶಾಸಕನ ರಕ್ಷಣೆ ಮಾಡದವರು, ಜನರ ರಕ್ಷಣೆ ಹೇಗೆ ಮಾಡ್ತಾರೆ: ಕಾಂಗ್ರೆಸ್ ವಿರುದ್ಧ ರಾಮದಾಸ್ ಕಿಡಿ - bangalore latest news
ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ದಲಿತ ಶಾಸಕರ ಮನೆ ಮೇಲೆ ಇಂತಹ ದಾಳಿ ನಡೆಸಿರುವುದು ಖಂಡನೀಯ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಶಾಸಕ ಎಸ್.ಎ.ರಾಮದಾಸ್
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷವೇ ಆಗಲೀ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದರು.
ಒಬ್ಬ ದಲಿತ ಶಾಸಕರ ಮನೆಗೆ ಹಾಗೂ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಈ ತರಹದ ವಿಚಾರದಲ್ಲಿ ಯಾವುದೇ ಪಕ್ಷದವರು ಅನಾವಶ್ಯಕವಾಗಿ ರಾಜಕಾರಣ ಮಾಡಬಾರದು. ಗಲಭೆಯಲ್ಲಿ ಮೃತಪಟ್ಟವನು ಬಿಜೆಪಿ ಕಾರ್ಯಕರ್ತನಾಗಿರಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕೀಳು ರಾಜಕಾರಣ ಬೇಡ ಎಂದು ರಾಮದಾಸ್ ಹೇಳಿದ್ರು.