ಕರ್ನಾಟಕ

karnataka

ETV Bharat / state

ಮಾವನ ಪರ ಪ್ರಚಾರಕ್ಕೆ ಬಂದ ಶಾಸಕನಿಗೆ ಜನರಿಂದ ತರಾಟೆ.. ಕ್ಯಾಂಪೇನ್ ಮಾಡದೆ ಕಾಲ್ಕಿತ್ತ ಹರ್ಷವರ್ಧನ್ - ವಿ.ಶ್ರೀನಿವಾಸ್ ಪ್ರಸಾದ್

ಮಾವನಿಗೆ ಮತ ಹಾಕಿ ಅಂತಾ ಪ್ರಚಾರಕ್ಕೆ ಬಂದ ಅಳಿಯನಿಗೆ ಊರ ಜನ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಊರಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಎಲೆಕ್ಷನ್ ನಲ್ಲಿ ವೋಟ್ ಕೇಳೋಕೆ ಬರೋರು, ಆಮೇಲೆ ನಿಮ್ಮ ಮನೆಗೆ ಬಂದ್ರೇ ಕೇರ್ ಮಾಡಲ್ಲ ಅಂತಾ ಕಿಡಿಕಾರಿದ್ದಾರೆ.

ಶಾಸಕ ಹರ್ಷವರ್ಧನ್

By

Published : Mar 31, 2019, 3:18 PM IST

ಮೈಸೂರು :ಚಾಮರಾಜನಗರ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ದ ಪ್ರಚಾರಕ್ಕೆ ತೆರಳಿದ ಅಳಿಯನ ವಿರುದ್ಧ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂಜನಗೂಡು ತಾಲೂಕಿನ ಶಾಸಕರಾಗಿರುವ ಹರ್ಷವರ್ಧನ್ ಅವರು, ಅವರ ಮಾವನಾದ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರ ಮೀಸಲು ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡು ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಿದ್ದರು. ಶ್ರೀ ಗುರುಮಲ್ಲೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು. ಬಳಿಕ ಮತಯಾಚನೆ ಮಾಡುವಾಗ ಊರ ಜನ ಶಾಸಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ಹರ್ಷವರ್ಧನ್ ಅವರಿಗೆ ಪ್ರಶ್ನೆ ಮಾಡುತ್ತಿರುವ ಜನರು

ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಂದಿನಿಂದಲೂ ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮ ಹಳ್ಳಿಗಳು ನೆನಪಾಗುತ್ತವೆ. ನಂತರ ನಾವು ನಿಮ್ಮ ಮನೆ ಬಾಗಿಲಿಗೆ ಬಂದರೂ ದೂರತಳ್ಳುತ್ತೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದರಿಂದ ಗಲಿಬಿಲಿಗೊಂಡ ಶಾಸಕ ಹರ್ಷವರ್ಧನ್, ಮಾವನ ಪರವಾಗಿ ಪ್ರಚಾರ ಮಾಡದೇ ಅರ್ಧಕ್ಕೆ ಮೊಟಕು ಮಾಡಿ ಬೇರೆ ಗ್ರಾಮಕ್ಕೆ ತೆರಳಿದರು.

ABOUT THE AUTHOR

...view details