ಕರ್ನಾಟಕ

karnataka

ETV Bharat / state

ಸ್ಟಾರ್ ನಟನ ಫಾರ್ಮ್​​​​ಹೌಸ್​ನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ.. ಆರೋಪಿ ವಶಕ್ಕೆ ಪಡೆದ ಪೊಲೀಸ್​ - Mysore crime news

ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ಪ್ರತಿಷ್ಠಿತ ನಟನ ಫಾರ್ಮ್​ಹೌಸ್​ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿಯ 10 ವರ್ಷದ ಮಗಳನ್ನು ಅದೇ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುವ ನಿಜಾಮ್​ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

Mysore minor girl rape case
ಮೈಸೂರಿನಲ್ಲಿ ಮತ್ತೊಂದು ಅತ್ಯಾಚಾರ

By

Published : Sep 18, 2021, 3:49 AM IST

Updated : Sep 18, 2021, 11:59 AM IST

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಲೈಂಗಿಕ ಕಿರುಕುಳ ಎಸಗಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಫಾರ್ಮ್​ಹೌಸ್​ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ದಂಪತಿಯ 10 ವರ್ಷದ ಮಗಳನ್ನು ಅದೇ ಫಾರ್ಮ್​ಹೌಸ್​ನಲ್ಲಿ ಕೆಲಸ ಮಾಡುವ ನಿಜಾಮ್​ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ನಿಜಾಮ್​ ಕುದುರೆಗಳಿಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದು, ಅದೇ ಫಾರ್ಮ್​ಹೌಸ್​​ನಲ್ಲಿ ಪ್ರತ್ಯೇಕ ರೂಮಿನಲ್ಲಿದ್ದ. ಈತ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ 10 ವರ್ಷದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ನಡೆದ ಮೂರು ದಿನಗಳ ನಂತರ ಬಾಲಕಿ ತನ್ನ ತಾಯಿಗೆ ಈ ಬಗ್ಗೆ ಹೇಳಿಕೊಂಡಿದ್ದಾಳೆ.

ಆರೋಪಿ ನಿಜಾಮನು ಅಪ್ರಾಪ್ತೆಗೆ 3-4 ಬಾರಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನು ಸಹ ಬಾಲಕಿ ತಾಯಿಯ ಬಳಿ ತಿಳಿಸಿದ್ದಾಳೆ.

ಈ ವಿಷಯ ಕೇಳಿ ಅಘಾತಗೊಂಡ ತಾಯಿ ಟಿ. ನರಸೀಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ನಿಜಾಮ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ:ದೇಗುಲ ಧ್ವಂಸದ ವಿರುದ್ಧ ಪ್ರತಿಭಟಿಸುವವರು ಹಿಂದೂ ತಾಲಿಬಾನಿಗಳು : ಪ್ರೊ. ಮಹೇಶ್ ಚಂದ್ರ ಗುರು

Last Updated : Sep 18, 2021, 11:59 AM IST

ABOUT THE AUTHOR

...view details