ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ದಸರ ಮಹೋತ್ಸವಕ್ಕೆ ಸಹಕಾರ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಸಂಸದ ಶ್ರೀನಿವಾಸಪ್ರಸಾದ್-ಸಚಿವ ವಿ.ಸೋಮಣ್ಣ ಭೇಟಿ, ಮಾತುಕತೆ - ಮೈಸೂರು ದಸರ ಮಹೋತ್ಸವ
ನಾಡ ಹಬ್ಬ ದಸರಾ ಮಹೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ, ಇಂದು ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ದಸರಾ ಮಹೋತ್ಸವ ಆಚರಣೆಗೆ ಸಲಹೆ ಮತ್ತು ಸಹಕಾರ ನೀಡಿ ಎಂದು ಕೇಳಿಕೊಂಡರು.
ನಾಡ ಹಬ್ಬ ದಸರಾ ಮಹೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ, ಇಂದು ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ದಸರಾ ಮಹೋತ್ಸವ ಆಚರಣೆಗೆ ಸಲಹೆ ಮತ್ತು ಸಹಕಾರ ನೀಡಿ ಎಂದು ಕೇಳಿಕೊಂಡರು.
ಇದಲ್ಲದೇ ಕಳೆದ 2 ದಿನಗಳ ಹಿಂದೆ ಸಂಸದ ಶ್ರೀನಿವಾಸಪ್ರಸಾದ್, ಪತ್ರಿಕಾಗೋಷ್ಠಿಯಲ್ಲಿ ಮೂರು ಜನ ಡಿಸಿಎಂ ನೇಮಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಈ ಸಂದರ್ಭದಲ್ಲಿ ಮೂರು ಜನ ಡಿಸಿಎಂಗಳ ನೇಮಕದ ಅವಶ್ಯಕತೆ ಏನಿತ್ತು ಎಂದು ಬಹಿರಂಗವಾಗಿಯೇ ಹೈಕಮಾಂಡ್ ಕ್ರಮವನ್ನ ಟೀಕಿಸಿದ್ದರು. ಈ ಹಿನ್ನೆಲೆ ಇಂದಿನ ಸಚಿವರ ಭೇಟಿ, ಮಾತುಕತೆ ಮಹತ್ವ ಪಡೆದಿದೆ.