ಮೈಸೂರು: ಶಿಥಿಲಗೊಂಡಿರುವ ಮೆಡಿಕಲ್ ಹಾಸ್ಟೆಲ್ ಛಾವಣಿ ಕುಸಿದ್ದಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ನಗರದ ಜೆಎಲ್ಬಿ ರಸ್ತೆಯಲ್ಲಿರುವ ಮೆಡಿಕಲ್ ಹಾಸ್ಟೆಲ್ನಲ್ಲಿ ಒಟ್ಟು 300 ವಿದ್ಯಾರ್ಥಿಗಳು ನೆಲೆಸಿದ್ದು, ತಡರಾತ್ರಿ ಸುರಿದ ಭಾರಿ ಮಳೆಯಿಂದ ಛಾವಣಿ ಕುಸಿದು ಬಿದ್ದಿದೆ.
ಘಟನೆ ಕುರಿತು ಮಾತನಾಡಿರುವ ಹಾಸ್ಟೆಲ್ ವಾರ್ಡನ್ ಚಂದ್ರಶೇಖರ್, ಈ ಹಾಸ್ಟೆಲ್ ಅನ್ನು 1962ರಲ್ಲಿ ನಿರ್ಮಿಸಲಾಗಿದೆ. ಮಳೆ ಬಂದ ಕಾರಣ ಮೇಲೆ ಇರುವ ರೂಮ್ನಲ್ಲಿ ಛಾವಣಿ ಕುಸಿದಿದ್ದು, ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ. ಹಾಗೂ ಮುಂದೆ ಬರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಗೆಸ್ಟ್ ಹೌಸ್ನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಈ ಹಾಸ್ಟೆಲ್ ಕಟ್ಟಡ ಸರಿಪಡಿಸುವಂತೆ ನಾವು ಹಾಗೂ ಅಧಿಕಾರಿಗಳು ಸಭೆ ನಡೆಸಿ ದರಸ್ತಿ ಕಾರ್ಯ ಕುರಿತು ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.