ಮೈಸೂರು: ಕಪಿಲಾ ಪ್ರವಾಹದಲ್ಲಿ ಈಜಲು ಹೋದ ವ್ಯಕ್ತಿವೋರ್ವ ನಾಪತ್ತೆ ಆಗಿದ್ದಾರೆ ಎಂದು ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸವಾಲು ಹಾಕಿ ಈಜಲು ಹೋದವ ಎಲ್ಹೋದ್ನೋ, ಏನಾದ್ನೋ.. ನಂಜನಗೂಡು ಪೊಲೀಸರಿಗೆ ದೂರು - case registered
ಕಪಿಲಾ ನದಿಯ ಪ್ರವಾಹದಲ್ಲಿ ಈಜಲು ಹೋಗಿ ವ್ಯಕ್ತಿದ್ದ ನಾಪತ್ತೆಯಾಗಿದ್ದಾನೆಂದು ದೂರು ದಾಖಲಾಗಿದೆ. ಅಸಾಧ್ಯವಾದದನ್ನೇ ಮಾಡುತ್ತೇನೆ ಎಂಬ ಛಲಕ್ಕೆ ಹೆಸರಾಗಿದ್ದ ಈ ವ್ಯಕ್ತಿ ಈ ರೀತಿ ನಾಪತ್ತೆ ಆಗಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ನಿನ್ನೆ ಕಪಿಲಾ ನದಿಯ ಪ್ರವಾಹದಲ್ಲಿ ನಂಜನಗೂಡಿನ ರೈಲ್ವೆ ಸೇತುವೆ ಬಳಿ ಸ್ನೇಹಿತರೊಂದಿಗೆ ಈ ನದಿಯಲ್ಲಿ ಈಜುವುದಾಗಿ ಸವಾಲು ಹಾಕಿ ಮೊಬೈಲ್ನಲ್ಲಿ ವಿಡಿಯೋ ಮಾಡುವಂತೆ ಹೇಳಿ ವೆಂಕಟೇಶ್ (55) ನದಿಗೆ ಹಾರಿದ್ದಾರೆ. ನಂಜನಗೂಡಿನ ಕಾಶಿ ವಿಶ್ವನಾಥ ದೇವಾಲಯದ ಅರ್ಚಕನಾಗಿದ್ದ ಇವರು ಇಡೀ ಭಾರತವನ್ನೇ ಸೈಕಲ್ನಲ್ಲೇ ಸುತ್ತಿದ್ದಾರೆ.
ಈತ ಪ್ರತಿ ವರ್ಷ ಕಪಿಲಾ ನದಿ ತುಂಬಿದ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಸವಾಲು ಹಾಕಿ ನದಿಯಲ್ಲಿ ಈಜಿ ಅರ್ಧ ಕಿಲೋಮೀಟರ್ ಹೋಗಿ ನಂತರ ಅಲ್ಲಿಂದ ಎದ್ದು ಬರುತ್ತಿದ್ದ. ಅದೇ ರೀತಿ ಈ ವರ್ಷವು ಸ್ನೇಹಿತರೊಂದಿಗೆ ಸವಾಲು ಹಾಕಿ ಹೋಗಿ ನಾಪತ್ತೆಯಾಗಿದ್ದಾರೆ ಎಂದು ಈತನ ಮಾವ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅಸಾಧ್ಯವಾದದನ್ನೇ ಮಾಡುತ್ತೇನೆ ಎಂಬ ಛಲಕ್ಕೆ ಹೆಸರಾಗಿದ್ದ ಈ ವ್ಯಕ್ತಿ ಈ ರೀತಿ ನಾಪತ್ತೆ ಆಗಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.