ಮೈಸೂರು : ಕೊರೊನಾ ಎರಡನೇ ಅಲೆ ಪರಿಸ್ಥಿತಿ ಹೀಗೆ ಮುಂದುವರಿದರೆ ಹೋಟೆಲ್ ಉದ್ಯಮಿಗಳು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಾರಾಯಣಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಮುಷ್ಕರ, ಕೊರೊನಾ ಎರಡನೇ ಅಲೆ ಎಫೆಕ್ಟ್ನಿಂದ ಹೋಟೆಲ್ ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ.
ಗ್ರಾಹಕರಿಲ್ಲದೆ ಮೈಸೂರಿನ ಹೋಟೆಲ್‌ಗಳು ಖಾಲಿ ಖಾಲಿಯಾಗಿದೆ. ಕೊರೊನಾ ಆತಂಕದಿಂದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೋಟೆಲ್ ಉದ್ಯಮದ ಮೇಲೆ ಆಗ್ತಿರುವ ಪರಿಣಾಮದ ಬಗೆಗೆ ಪ್ರತಿಕ್ರಿಯೆ.. ಶೇ.5ರಷ್ಟೂ ಹೋಟೆಲ್ ಉದ್ಯಮ ನಡೆಯುತ್ತಿಲ್ಲ. ಕಳೆದ ವರ್ಷದಿಂದಲೂ ವ್ಯವಹಾರ ಇಲ್ಲದೆ ಹಲವು ಹೋಟೆಲ್‌ಗಳು ಮುಚ್ಚಿವೆ. ಈಗ ಮತ್ತೆ ಅದೇ ವಾತಾವರಣ ನಿರ್ಮಾಣವಾಗ್ತಿದೆ. ಇನ್ನೊಂದೆಡೆ ಸಾರಿಗೆ ನೌಕರರ ಮುಷ್ಕರದಿಂದ ಹೋಟೆಲ್ಗೆ ಜನ ಬರುತ್ತಿಲ್ಲ.
ಲಾಭವಿಲ್ಲದೆ ಹೋಟೆಲ್ಗಳ ನಿರ್ವಹಣೆಯೂ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡಬಾರದಿತ್ತು. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರೆ ಒಳ್ಳೆಯದು ಎಂದರು.
ಓದಿ : ಸಾರಿಗೆ ನೌಕರರ ಮುಷ್ಕರ: 18 ಮಹಿಳೆಯರ ವಿರುದ್ಧ ಪ್ರಕರಣ ದಾಖಲು
ಹೋಟೆಲ್ಗಳನ್ನು ಮುಚ್ಚುವ ಹಂತಕ್ಕೆ ತಲುಪಿದ್ದೇವೆ. ಹಾಗಾಗಿ, ಸರ್ಕಾರ ನಮ್ಮತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಹೋಟೆಲ್ ಉದ್ಯಮಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂದು ಅಳಲು ತೋಡಿಕೊಂಡರು.