ಕರ್ನಾಟಕ

karnataka

ETV Bharat / state

ನಾ ಕನ್ನಡ ಚಳವಳಿಯಿಂದಲೇ ಬಂದವ, ಮರಾಠ ಪ್ರಾಧಿಕಾರದ ಅವಶ್ಯಕತೆ ಏನಿತ್ತು?- ಹೆಚ್ ವಿಶ್ವನಾಥ್ ಪ್ರಶ್ನೆ - MLC H Viswanath

ಕುರುಬ ಸಮುದಾಯದ ಈ ಹೋರಾಟದ ನಾಯಕತ್ವವನ್ನು ನೀವೇ ವಹಿಸಿ.. ನಿಮ್ಮ ಹಿಂದೆ ಸಮಾಜದ ಎಲ್ಲಾ ನಾಯಕರು ಬರುತ್ತೇವೆ. ಇಲ್ಲಿ ರಾಜಕೀಯ ಲಾಭ ಅಲ್ಲ, ಸಮುದಾಯದ ಋಣ ತೀರಿಸುವ ಕೆಲಸ ಮಾಡಿ..

Let Siddaramaiah himself lead the protest of the shepherd community: MLC H. Vishwanath
ಎಂಎಲ್​ಸಿ ಹೆಚ್. ವಿಶ್ವನಾಥ್ ಸುದ್ದಿಗೋಷ್ಠಿ

By

Published : Dec 4, 2020, 2:19 PM IST

ಮೈಸೂರು :ಸಿದ್ದರಾಮಯ್ಯನವರು ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಹೋರಾಟದಲ್ಲಿ ನಾಯಕತ್ವ ವಹಿಸಲಿ. ನಾವು ಅವರ ಹಿಂದೆ ಬೆಂಬಲ ಸೂಚಿಸುತ್ತೇವೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್, ಮಾಜಿ ಸಿಎಂಗೆ ಆಹ್ವಾನ ನೀಡಿದ್ದಾರೆ.

ಎಂಎಲ್​ಸಿ ಹೆಚ್. ವಿಶ್ವನಾಥ್ ಸುದ್ದಿಗೋಷ್ಠಿ

ಇಂದು ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕುರುಬರನ್ನು ಎಸ್​ಟಿಗೆ ಸೇರಿಸಲು ನಡೆಯುತ್ತಿರುವ ಹೋರಾಟದಲ್ಲಿ ನನ್ನನ್ನು ಕರೆಯಲಿಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕುರುಬ ಸಮುದಾಯದ ಈ ಹೋರಾಟದ ನಾಯಕತ್ವವನ್ನು ನೀವೇ ವಹಿಸಿ.. ನಿಮ್ಮ ಹಿಂದೆ ಸಮಾಜದ ಎಲ್ಲಾ ನಾಯಕರು ಬರುತ್ತೇವೆ. ಇಲ್ಲಿ ರಾಜಕೀಯ ಲಾಭ ಅಲ್ಲ, ಸಮುದಾಯದ ಋಣ ತೀರಿಸುವ ಕೆಲಸ ಮಾಡಿ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ. ಈ ಹೋರಾಟದ ಹಿಂದೆ ಆರ್​ಎಸ್ಎಸ್ ಇದೆ ಎಂಬ ಹೇಳಿಕೆ ಸರಿಯಲ್ಲ. ಇದು ಸಮುದಾಯದ ಕೆಲಸ ಎಂದು ವಿಶ್ವನಾಥ್ ಹೇಳಿದರು.

ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸುವ ಬಗ್ಗೆ ನಾನು ಏನ್ನನ್ನೂ ಹೇಳುವುದಿಲ್ಲ. ಆದರೆ, ನಾನು ಕನ್ನಡ ಪರ ಚಳುವಳಿಯಿಂದಲೇ ಬಂದವನು, ಈಗ ಮರಾಠ ಪ್ರಾಧಿಕಾರ ರಚನೆ ಮಾಡುವ ಅಗತ್ಯತೆ ಏನಿತ್ತು? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ABOUT THE AUTHOR

...view details