ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಿಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಳಿ ಇರುವುದರಿಂದ ಈ ಪ್ರಕರಣದಲ್ಲಿ ಬಿಎಸ್ವೈ ಗಪ್ ಚುಪ್ ಆಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸರ್ಕಾರವನ್ನೇ ಉರುಳಿಸಿದ್ದೇನೆ. ಇನ್ನೂ ಸಿಡಿ ಪ್ರಕರಣ ಯಾವ ಲೆಕ್ಕ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಯಡಿಯೂರಪ್ಪನವರು ಮಾತ್ರ ಗಪ್ ಚುಪ್ ಆಗಿದ್ದಾರೆ. ಯಾಕಂದ್ರೆ ಯಡಿಯೂರಪ್ಪನವರ ಸಿಡಿ ಇವರ ಬಳಿ ಇದೆ. ಕಳೆದ 26 ದಿನಗಳಿಂದ ರಾಜ್ಯ ‘ನಾಟಕ್ ಕರ್ನಾಟಕ್’ ಆಗಿದೆ. ಯಡಿಯೂರಪ್ಪ ನೀವು ಹೆದರಿಕೊಳ್ಳಬೇಡಿ. ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಅವರು ವ್ಯಂಗ್ಯವಾಡಿದರು.
ರಕ್ಷಣೆ ನೀಡಿದರೆ ಸ್ವತಃ ನ್ಯಾಯಧೀಶರ ಮುಂದೆ ಬರುತ್ತೇನೆ ಎಂದು ಸಂತ್ರಸ್ತೆ ಯುವತಿಯೇ ಹೇಳುತ್ತಿದ್ದಾಳೆ. ಇಷ್ಟೆಲ್ಲಾ ಇದ್ದರೂ ಸಂತ್ರಸ್ತೆಯನ್ನೇ ವಿಲನ್ ರೀತಿ ಬಿಂಬಿಸುತ್ತಿದ್ದಾರೆ. ದಿನನಿತ್ಯ ಸಿನಿಮಾ ಓಡುತ್ತಿದೆ. ಹೀರೋ ಯಾರು? ಹೀರೋಯಿನ್ ಯಾರು? ಅವರಿಬ್ಬರನ್ನು ಹೊರತುಪಡಿಸಿ ಸೈಡ್ ಆ್ಯಕ್ಟರ್ಗಳು ಕೂಡ ಗಮನ ಹರಿಸುತ್ತಿದ್ದಾರೆ ಎಂದು ಬಿಜಿಪಿ ನಾಯಕರನ್ನು ಟೀಕಿಸಿದರು.
ಇದನ್ನೂ ಓದಿ:ಪೊಲೀಸರಿಗೆ ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ
ಬಿ.ಎಲ್.ಸಂತೋಷ್ ಎಲ್ಲಿದ್ದೀರಾ?:
ಬಿ.ಎಲ್.ಸಂತೋಷ್ ವೇರ್ ಆರ್ ಯು?, ಸಣ್ಣ ಪುಟ್ಟ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಸಂತೋಷ್ ಎಲ್ಲಿದ್ದೀರಿ? ಒಬ್ಬ ಯುವತಿಗೆ ಅನ್ಯಾಯವಾಗಿದ್ದರೂ, ಯಾಕೆ ಸುಮ್ಮನೆ ಕುಳಿತಿದ್ದೀರಿ? 376ಸಿ ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಈ ಕೇಸ್ ಹಾಕುತ್ತಿದ್ದೀರಿ? ಈ ಸೆಕ್ಷನ್ ನಲ್ಲಿ ಹಾಕುವ ಹಾಗಿಲ್ಲ. ಪೊಲೀಸರು ನಿರ್ಭಯ ಆಕ್ಟ್ ಅನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ. ರಾಜಾರೋಷವಾಗಿ ಜಾರಕಿಹೊಳಿ ಓಡಾಡುತ್ತಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದೀರಿ? ಯುವತಿ ಪ್ರಾಣಭಯದಿಂದ ಮನವಿ ಮಾಡಿಕೊಂಡಿದ್ದಾಳೆ. ಯುವತಿಯ ಪೋಷಕರು ಕಳೆದ 10 ದಿನಗಳಿಂದ ಎಲ್ಲಿದ್ದರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ಮಾಡಿರೋ ಕೆಲಸ ಮುಚ್ಚಿಕೊಳ್ಳಲು ಜಾತಿ ತರುತ್ತಿದ್ದೀರಾ?: