ಕರ್ನಾಟಕ

karnataka

ETV Bharat / state

ಪ್ರತಾಪ್ ಸಿಂಹ ಬ್ಲ್ಯೂ ಫಿಲಂ ಹೀರೊ ಆಗಲಷ್ಟೇ ಲಾಯಕ್ಕು.. ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್​ ತಿರುಗೇಟು - ಮೈಸೂರು

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ರೋಲ್​ಕಾಲ್ ಗಿರಾಕಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ‌‌ ಲಕ್ಷ್ಮಣ್, ಸಾಬೀತು ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ನನ್ನ 25 ವರ್ಷಗಳ ಹೋರಾಟದ ಜೀವನದಲ್ಲಿ ಎಂದಾದರೂ ಯಾರಿಗಾದ್ರೂ ಬ್ಲ್ಯಾಕ್‌ಮೇಲ್ ಮಾಡಿದ್ರೆ ಇವರು ಸಾಬೀತು‌ ಮಾಡಲಿ..

M Laxman
ಲಕ್ಷ್ಮಣ್​

By

Published : Aug 30, 2020, 2:41 PM IST

ಮೈಸೂರು :ಸಂಸದ ಪ್ರತಾಪ್ ಸಿಂಹ ಬ್ಲ್ಯೂ ಫಿಲಂ ಹೀರೊ.. ಸಂಸದರಾಗಲು ಇವರು ಲಾಯಕ್ಕಲ್ಲ. ಬ್ಲ್ಯೂ ಫಿಲಂ‌ ಹೀರೊ ಆಗಲು ಮಾತ್ರ ಲಾಯಕ್ಕು ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರತಾಪ್​ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಲಕ್ಷ್ಮಣ್

ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇವರ ಅಸಹ್ಯ ಆಡಿಯೋ ಸಂಭಾಷಣೆಯನ್ನ ಸದ್ಯದಲ್ಲೇ ಬಿಡುಗಡೆ ಮಾಡುವೆ. ಇವರ ಯೋಗ್ಯತೆಯನ್ನು ಜನರ ಮುಂದಿಡುವೆ. ನಾನು ಮಾಡುತ್ತಿರೋ ಆರೋಪವನ್ನು ಸಾಬೀತು‌ ಮಾಡುತ್ತೇನೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ಪತ್ರ ಬರೆದೇ ಹೇಳುವೆ ಎಂದು ಗುಡುಗಿದರು.

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ರೋಲ್​ಕಾಲ್ ಗಿರಾಕಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ‌‌ ಲಕ್ಷ್ಮಣ್, ಸಾಬೀತು ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ನನ್ನ 25 ವರ್ಷಗಳ ಹೋರಾಟದ ಜೀವನದಲ್ಲಿ ಎಂದಾದರೂ ಯಾರಿಗಾದ್ರೂ ಬ್ಲ್ಯಾಕ್‌ಮೇಲ್ ಮಾಡಿದ್ರೆ ಇವರು ಸಾಬೀತು‌ ಮಾಡಲಿ. ಪ್ರತಾಪ್ ಸಿಂಹ ಗ್ರಾಪಂ ಚುನಾವಣೆಯಲ್ಲೂ ಗೆಲ್ಲಲು ಅರ್ಹನಲ್ಲ, ಪ್ರಧಾನಿ ಮೋದಿ ಮುಖ ನೋಡಿ ಜನ ಇವರನ್ನು ಗೆಲ್ಲಿಸಿದ್ದಾರೆ ಎಂದು ವಾಗ್ದಾಳಿ‌ ನಡೆಸಿದರು.

ನಾನು ಪ್ರತಾಪ್ ಸಿಂಹಗೆ ಚಾಲೆಂಜ್ ಮಾಡ್ತೇನೆ. ನಾವಿಬ್ಬರೂ ಡಿಬೇಟ್ ಮಾಡೋಣ. ನಿಮ್ಮ ಮೇಲಿನ ಆರೋಪಕ್ಕೆ ನಾನು ಸಾಕ್ಷಿ ಕೋಡ್ತೇನೆ. ನಿಮ್ಮ ವಿರುದ್ಧ ಡಿಬೇಟ್​ನಲ್ಲಿ‌ ಸಾಕ್ಷಿ ಕೊಡಲಿಲ್ಲ ಅಂದರೆ ಕಲಾಮಂದಿರದ ಹೊರಗೆ ನೇಣು ಹಾಕಿಕೊಳ್ಳುತ್ತೇನೆ‌. ನಾನು ಯಾರಿಂದನಾದ್ರೂ ದುಡ್ಡು ತಿಂದಿದ್ರೆ ಪ್ರತಾಪ್ ಸಿಂಹ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ABOUT THE AUTHOR

...view details