ಕರ್ನಾಟಕ

karnataka

ETV Bharat / state

ಗಾಯಗೊಂಡ ಕಾಡು ಪ್ರಾಣಿಗಳ ಸೂಪರ್ ಸ್ಪೆಷಾಲಿಟಿ‌ ಹಾಸ್ಪಿಟಲ್‌ ಈ ಕೂರ್ಗಳ್ಳಿ ಪುನರ್ವಸತಿ ಕೇಂದ್ರ - ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ

ಮೈಸೂರು ಮೃಗಾಲಯ ವತಿಯಿಂದ ನಗರದ ಹೊರವಲಯದಲ್ಲಿ ಪುನರ್ವಸತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಗಾಯಗೊಂಡ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ..

Mysore Zoo
ಮೈಸೂರು ಮೃಗಾಲಯ

By

Published : Oct 23, 2021, 7:25 PM IST

ಮೈಸೂರು :ಗಾಯಗೊಂಡ ಕಾಡು ಪ್ರಾಣಿಗಳ ಚಿಕಿತ್ಸೆಗಾಗಿ ಮೈಸೂರು ಮೃಗಾಲಯ ವತಿಯಿಂದ ನಗರದ ಹೊರವಲಯದಲ್ಲಿ ಪುನರ್ವಸತಿ ಕೇಂದ್ರವನ್ನು ತೆರೆಯಲಾಗಿದೆ. ನಗರದ ಹೊರವಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರ 98 ಎಕರೆ ವಿಸ್ತಾರವಾದ ಪ್ರದೇಶವನ್ನು ಹೊಂದಿದೆ.

ರಾಜ್ಯದಲ್ಲೇ ವಿಶೇಷ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಗಾಯಗೊಂಡ ಹುಲಿ, ಚಿರತೆ, ಆನೆ ಮತ್ತಿತರ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಹೊಂದಿದೆ. ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆ ಸೇರಿ ನಾನಾ ಭಾಗಗಳಲ್ಲಿ ಸೆರೆ ಸಿಗುವ ಗಾಯಗೊಂಡ ಕಾಡು ಪ್ರಾಣಿಗಳನ್ನು ಈ ಪುನರ್ವಸತಿ ಕೇಂದ್ರದಲ್ಲಿ ಕರೆ ತಂದು ಚಿಕಿತ್ಸೆ ನೀಡಲಾಗುತ್ತದೆ. ಕಳೆದೊಂದು ವರ್ಷದಿಂದ ಈ ಕೇಂದ್ರವನ್ನು ಉನ್ನತೀಕರಿಸಲಾಗಿದೆ.

ಆನೆಗಳಿಗಾಗಿ ನಿರ್ಮಿಸಿರುವ ಈಜು ಕೊಳ

ಈವರೆಗೆ ಸುಮಾರು 25 ಹುಲಿಗಳು ಹಾಗೂ 30ಕ್ಕೂ ಅಧಿಕ ಸಂಖ್ಯೆಯ ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳಿಗೆ ಕೇಂದ್ರದಲ್ಲಿರುವ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗಾಯಗೊಂಡ ಪ್ರಾಣಿಗಳ ಪ್ರಾಣ ಉಳಿಸಿದ್ದಾರೆ.

ಆನೆಗಳಿಗೆ ಈಜು ಕೊಳ ನಿರ್ಮಾಣ :ಪುನರ್ವಸತಿ ಕೇಂದ್ರದಲ್ಲಿ ವಯಸ್ಸಾದ ಆನೆಗಳಿಗಾಗಿಯೇ ಈಜುಕೊಳವನ್ನು ನಿರ್ಮಾಣ ಮಾಡಲಾಗಿದೆ. ಈಜುವುದರಿಂದ ಚಿಕಿತ್ಸೆಯ ಜೊತೆಗೆ ಹಿರಿಯ ಆನೆಗಳಿಗೆ ಸಾಮಾನ್ಯವಾಗಿ ಕಾಡುವ ಸಂದಿವಾತದಂತಹ ರೋಗಗಳಿಗೆ ರಾಮಬಾಣವಾಗಲಿದೆ. ಪ್ರತಿನಿತ್ಯ ಈಜುವುದರಿಂದ ಅವುಗಳ ಆರೋಗ್ಯ ಸುಧಾರಿಸುತ್ತದೆ ಎಂಬ ಪರಿಕಲ್ಪನೆಯಿಂದ ಇದನ್ನು ನಿರ್ಮಾಣ ಮಾಡಲಾಗಿದೆ.

ಹೊರ ರಾಜ್ಯದ ಪ್ರಾಣಿಗಳಿಗೂ‌ ಚಿಕಿತ್ಸೆ :ಇತ್ತೀಚಿಗೆ ‌ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಧುಮಲೈ ಅರಣ್ಯ ಪ್ರದೇಶದಲ್ಲಿ ಟಿ-23 ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಹುಲಿಗೆ ಈ ಪುನರ್ವಸತಿ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಈಜುಕೊಳದಲ್ಲಿ ಆನೆಗಳ ಮೋಜು

ಇದರ ಜೊತೆಗೆ ಕೆಲ ದಿನಗಳ ಹಿಂದೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಗಾಯಗೊಂಡು ನರಳಾಡುತ್ತಿದ್ದ ಹುಲಿಗೂ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮೈಸೂರು ಮೃಗಾಲಯವು ಗಾಯಗೊಂಡ ಪ್ರಾಣಿಗಳ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರವನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರೀತಿ ಮಾಡಿದೆ.

ಇದನ್ನೂ ಓದಿ: 20 ಸಾವಿರ ಹಣ ಇಟ್ಟಿದ್ದೇನೆ, ಅದನ್ನು ಬಳಸಿ ಅಂತ್ಯಕ್ರಿಯೆ ಮಾಡಿ: ಡೆತ್​​ ನೋಟ್ ಬಹಿರಂಗ

ABOUT THE AUTHOR

...view details